ಯಾದಗಿರಿ | ದೈಹಿಕ, ಮಾನಸಿಕ ಬೆಳವಣಿಗೆಗೆ ಕ್ರೀಡೆಗಳ ಪಾತ್ರ ಅತೀ ಮುಖ್ಯ : ಅಯ್ಯಪ್ಪ

ಯಾದಗಿರಿ/ನಾರಾಯಣಪುರ : ಹೆಣ್ಣು ಮಕ್ಕಳು ಕ್ರೀಡೆಯಲ್ಲಿ ಭಾಗವಹಿಸುವುದರಿಂದ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ವೃದ್ಧಿಯಾಗುವುದು ಎಂದು ಕೊಡೇಕಲ್ ನ ಪಿ.ಎಸ್.ಐ ಅಯ್ಯಪ್ಪ ಅವರು ತಿಳಿಸಿದರು.
ಅವರು ಜಿಲ್ಲಾ ಆಡಳಿತ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ತಾಲೂಕ್ ಪಂಚಾಯತ್ ಹುಣಸಗಿ ಮತ್ತು ಗ್ರಾಮ ಪಂಚಾಯತ್ ರಾಜನಕೋಳೂರು ಸಹಯೋಗದೊಂದಿಗೆ ರಾಜನಕೋಳೂರ ಗ್ರಾಮದಲ್ಲಿ ಕೆಹೆಚ್‌ಪಿಟಿ ಸ್ಫೂರ್ತಿ ಯೋಜನೆ ಕಡೆಯಿಂದ ತಾಲೂಕು ಮಟ್ಟದ ಕ್ರೀಡಾಕೂಟ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಇಂದಿನ ದಿನಮಾನಗಳಲ್ಲಿ ಮಹಿಳೆಯರಿಗೆ ಸರಿಯಾದ ರೀತಿಯ ಮಾರ್ಗದರ್ಶನದೊಂದಿಗೆ ಪ್ರೋತ್ಸಾಹ ದೊರೆತಲ್ಲಿ ಅವರು ಎಲ್ಲಾ ರಂಗಗಳಲ್ಲಿ ಮುಂದೆ ಬರುತ್ತಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಡಾ.ಸಿಮಾ ಕೋರಿ ಕೊಡೇಕಲ್, ಮಾಜಿ ಜಿಲ್ಲಾ ಪಂಚಾಯತ್ ಸದ್ಯಸರಾದ ಎಚ್.ಸಿ ಪಾಟೀಲ್, ಪ್ರಮುಖರಾದ ಸೋಮನಗೌಡ ಗುಲಬಳ, ಸಂಗನಗೌಡ ಮಗನೂರ್, ರಾಜನ ಕೋಳೂರ ಗ್ರಾ.ಪಂ ಸದಸ್ಯರಾದ ರಾಮನಗೌಡ ವಾಟರ್, ಶಿವರಾಜ್ ಬಿರಾದಾರ್, ಬಸವರಾಜ ಮಂಟೇ, ಚಿಂತನ್ ಡಿ ಸೋಜಾ DPC ಜಿಲ್ಲಾ ಸಂಯೋಜಕರು ಯಾದಗಿರಿ, ಶಿವರಾಜ ನಾಯಕ TC ತಾಲೂಕು ಸಂಯೋಜಕರು ಹುಣಸಗಿ, ಅನುಸೂಯ ಮುಖ್ಯ ಗುರುಗಳು MPS ರಾಜನಕೋಳೂರು, ಮತ್ತಿತರರು ಭಾಗವಹಿಸಿದರು.
ಕಾರ್ಯಕ್ರಮವನ್ನು ವಿದ್ಯಾ ರಾಜನಕೋಳೂರ ಸ್ವಾಗತಿಸಿ, ರೇಣುಕಾ ನಿರೂಪಿಸಿ, ಕೆಹೆಚ್‌ಪಿಟಿ ತಾಲೂಕು ಸಂಯೋಜಕರಾದ ಶಿವರಾಜ ನಾಯಕ ವಂದಿಸಿದರು.







