ಯಾದಗಿರಿ | ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ವಿವಿಧ ಜನ ಜಾಗೃತಿ ಕಾರ್ಯಕ್ರಮ : ಸಿಇಒ ಲವೀಶ್ ಒರಡಿಯಾ

ಯಾದಗಿರಿ : ಮಾ.8 ರಂದು ವಿಶ್ವ ಮಹಿಳೆಯರ ದಿನಾಚರಣೆಯ ಅಂಗವಾಗಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಗಳಲ್ಲಿ ನೀರು, ನೈರ್ಮಲ್ಯ ಮತ್ತು ಶುಚಿತ್ವದ ಅಂಶಗಳಲ್ಲಿ ಮಹಿಳೆಯರ ಪಾತ್ರ ಹಾಗೂ ಪ್ರಾಮುಖ್ಯತೆಯನ್ನು ಅರಿತು, ಮಹಿಳೆಯರ ಭಾಗವಹಿಸುವಿಕೆಯನ್ನು ಬಲಪಡಿಸಲು ಜನ ಜಾಗೃತಿ ಕಾರ್ಯಕ್ರಮ ಮತ್ತು ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಲವಿಶ್ ಒರಡಿಯಾ ಅವರು ತಿಳಿಸಿದರು.
ಪ್ರತಿ ವರ್ಷದಂತೆ ಈ ವರ್ಷವು ಮಾ.8 ರಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಮಾಡಲಾಗುತ್ತಿದೆ. ಈ ವರ್ಷವು ವಿಶೇಷ ಥೀಮ್ ನೊಂದಿಗೆ ಗ್ರಾಮೀಣ ಪ್ರದೇಶದ ಜನರಲ್ಲಿ ನೀರು, ನೈರ್ಮಲ್ಯ ಮತ್ತು ಶುಚಿತ್ವದ ಅಂಶಗಳ ಕುರಿತು ಜಾಗೃತಿ ಮೂಡಿಸಲು ವಿಶೇಷ ಕಾರ್ಯಕ್ರಮ ಚಟುವಟಿಕೆಯನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಎಲ್ಲಾ ಚಟುವಟಿಕೆಗಳಲ್ಲಿ ಚುನಾಯಿತ ಪ್ರತಿನಿದಿ, ಸಾರ್ವಜನಿಕರು, ಮಹಿಳೆಯರು, ಕಿಶೋರಿಯರು, ಮಕ್ಕಳು, ಸ್ವ ಸಹಾಯ ಸಂಘದ ಮಹಿಳೆಯರು, ಆಶಾ -ಅಂಗನವಾಡಿ ಕಾರ್ಯಕರ್ತೆಯರು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲು ಮನವಿ ಮಾಡಿಕೊಂಡರು.
ಮಾ.5 ರಿಂದ 8 ವರಗೆ ವಿಶೇಷ ಕಾರ್ಯಕ್ರಮ :
ಮಹಿಳಾ ಗ್ರಾಮ ಸಭೆ :
ಗ್ರಾಮಗಳಲ್ಲಿ ಮಹಿಳಾ ಗ್ರಾಮ ಸಭೆಯನ್ನು ಆಯೋಜಸುವ ಮೂಲಕ ಪ್ರತಿಯೊಂದು ಕ್ಷೇತ್ರದಲ್ಲಿ ಮಹಿಳೆಯರು ಭಾಗವಹಿಸುವಿಕೆ ಎಲ್ಲಾ ರಂಗದಲ್ಲಿ ಮುಂದೆ ಬರುವಂತೆ ಪ್ರೋತ್ಸಾಹಿಸಿ ಮಹಿಳೆಯರನ್ನು ಸಬಲೀಕರಣ ಮಾಡಲು ಇರುವ ಯೋಜನೆ/ ಕಾರ್ಯಕ್ರಮಗಳ ಮಾಹಿತಿ ನೀಡುವುದು.
ಸ್ವಚ್ಛತಾ ಓಟ :
ಸ್ವಚ್ಛತೆಯ ಕುರಿತು ಉತ್ತಮ ಅಭ್ಯಾಸಗಳನ್ನು ಪ್ರತಿಯೊಬ್ಬರು ರೂಡಿಸಿಕೊಳ್ಳುವಂತೆ ಜಾಗೃತಿ ಮೂಡಿಸಲು ಸ್ವಚ್ಛತೆಯ ಓಟ ಸ್ಪರ್ಧೆಯನ್ನು ಏರ್ಪಡಿಸಲಾಗುತ್ತಿದೆ.
ಸ್ವಚ್ಛ ಅಂಗಳ-ಶುಚಿತ್ವದ ರಂಗೋಲಿ :
ಸ್ವಚ್ಛ ವಾಹಿನಿಯ ಸಿಬ್ಬಂದಿಯಿಂದ / ಸ್ವಚ್ಛತಾ ಸಿಬ್ಬಂದಿಯಿಂದ ಗ್ರಾಮದಲ್ಲಿನ ತ್ಯಾಜ್ಯ ಸಂಗ್ರಹಣೆಮಾಡುತ್ತಾ / ತ್ಯಾಜ್ಯ ನಿರ್ವಹಣೆಯ ಮಾಹಿತಿ ನೀಡುತ್ತಾ ಮನೆಯ ಸುತ್ತಾ- ಮತ್ತಾ ಸ್ವಚ್ಛತೆಯಿಂದ ಇರುಲು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂಬುದನ್ನು ತಿಳಿಸಿ ಮನೆಯ ಮುಂದಿನ ಅಂಗಳ ಸ್ವಚ್ಛತೆಯಿಂದ ಕೂಡಿರುವ ಮನೆಗಳನ್ನು ಗುರುತಿಸಿ ರಂಗೋಲಿ ಬಿಡಿಸಿ ಇತರರು ಸ್ವಚ್ಛತೆಯಿಂದ ಇರುವಂತೆ ಜಾಗೃತಿಯ ಮಾಹಿತಿ ನೀಡುವುದು ಸ್ವಚ್ಛ ಅಂಗಳ- ಶುಚಿತ್ವದ ರಂಗೋಲಿ ಕಾರ್ಯಕ್ರಮವಾಗಿದೆ.
ಪ್ಯಾನಲ್ ಚರ್ಚೆ ( ಗುಂಪು ಸಂವಾದ) :
ಮಹಿಳಾ ಅಧಿಕಾರಿಯ ನೇತೃತ್ವದಲ್ಲಿ ನೀರು ಮತ್ತು ನೈರ್ಮಲ್ಯ ವಿಷಯದಲ್ಲಿ ಮಹಿಳೆಯರ ಪಾತ್ರ ಕುರಿತು ಹಾಗೂ ಮಹಿಳೆಯರ ಸಬಲೀಕರಣ ಬಗ್ಗೆ ಸಂವಾದ ನಡೆಸುವುದು ಹಾಗೂ ನೀರಿನ ಮಿತ ಬಳಕೆ, ಮರುಬಳಕೆ, ತ್ಯಾಜ್ಯ ನಿರ್ವಹಣೆ, ಮುಂತಾದ ವಿಷಯಗಳ ಕುರಿತು ಚರ್ಚಿಸಲು ಸಾಧನೆ ಮಾಡಿರುವ ವ್ಯಕ್ತಿಯೊಂದಿಗೆ ಸಂವಾದ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ.
ಜಿಲ್ಲಾ ಮಟ್ಟದಲ್ಲಿ ಸನ್ಮಾನ:
ಈ ಎಲ್ಲಾ ಚಟುವಟಿಕೆಗಳಲ್ಲಿ ಉತ್ತಮ ಪ್ರಗತಿ ಮಾಡಿರುವ/ ಕಾರ್ಯಕ್ರಮ- ಚಟುವಟಿಕೆ ಆಯೋಜನೆ/ ಭಾಗವಹಸಿರುವ ಉತ್ತಮ ಯಶೋಗಾಥೆ ಹೊಂದಿರುವ ಮಹಿಳೆಯರನ್ನು ಗುರಿತಿಸಿ ಜಿಲ್ಲಾ ಮಟ್ಟದಲ್ಲಿ ಸನ್ಮಾನಿಸಲಾಗುವುದು. ಹಾಗಾಗಿ ಉತ್ತಮ ರೀತಿಯಲ್ಲಿ ಕಾರ್ಯಕ್ರಮ/ ಚಟುವಟಿಕೆ ಆಯೋಜಿಸಿ ಅದರಲ್ಲಿ ಪ್ರತಿಯೊಬ್ಬರು ಭಾಗವಹಿಸಿ ಯಶಸ್ವಿಗೊಳಿಸಲು ಮನವಿ ಮಾಡಿದರು.







