ಯಾದಗಿರಿ | ಭೇಟಿ ಪಡಾವೋ ಬೇಟಿ ಬಚಾವೋ ತರಬೇತಿ ಕಾರ್ಯಗಾರ

ಹುಣಸಗಿ : ತಾಲೂಕಿನ ರಾಜನಕೊಳೂರ ಗ್ರಾಮದ ವಾಲ್ಮೀಕಿ ಸಮುದಾಯ ಭವನದಲ್ಲಿ ಭೇಟಿ ಬಚಾವೋ ಭೇಟಿ ಪಡಾವೋ, ಬಾಲ್ಯ ವಿವಾಹ ನಿರ್ಮೂಲನೆ ಕಾವಲು ಸಮಿತಿ ಸಭೆ ಮತ್ತು ಮಕ್ಕಳ ಹಕ್ಕುಗಳ ರಕ್ಷಣೆ ಕುರಿತು ಕಾರ್ಯಕ್ರಮ ನಡೆಸಲಾಯಿತು.
ಸಸಿಗೆ ನೀರೆರೆಯುವ ಮೂಲಕ ಜಿಲ್ಲಾ ಕಾರ್ಯ ನಿರೂಪಣಾಧಿಕಾರಿ ಪ್ರೇಮಮೂರ್ತಿ ಚಾಲನೆ ಗೊಳಿಸಿ ಮಾತನಾಡಿ, 2015ರಲ್ಲಿ ಭಾರತ ಸರ್ಕಾರವು ದೇಶದಲ್ಲಿ ಲಿಂಗ ತಾರತಮ್ಯ ಮತ್ತು ಮಹಿಳಾ ಸಬಲೀಕರಣದ ಬಗ್ಗೆ ಕಳವಳಗಳನ್ನು ಪರಿಹರಿಸಲು ಬೇಟಿ ಬಚಾವೋ ಬೇಟಿ ಪಡಾವೋ ಡಿಬಿಬಿಪಿ ಯೋಜನೆಯನ್ನು ಪರಿಚಯಿಸಿತು.
ಭೇಟಿ ಬಚಾವೋ ಭೇಟಿ ಪಡಾವೋ ಎಂಬ ಹೆಸರಿನ ಅರ್ಥ ಹೆಣ್ಣು ಮಗುವನ್ನು ಉಳಿಸಿ ಹೆಣ್ಣು ಮಗುವಿಗೆ ಶಿಕ್ಷಣ ನೀಡಿ ಈ ಯೋಜನೆಯ ಲಿಂಗ ತಾರತಮ್ಯದ ವಿರುದ್ಧ ನಾಗರಿಕರಿಗೆ ಶಿಕ್ಷಣ ನೀಡುವುದು ಮತ್ತು ಹುಡುಗಿಯರಿಗೆ ಕಲ್ಯಾಣ ಸೇವೆಗಳ ಪರಿಣಾಮಕಾರಿತ್ವವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ ಎಂದರು.
ವೈದ್ಯಧಿಕಾರಿಗಳಾದ ಡಾ.ಮಂಜುನಾಥ್ ಚಂದ, ಡಾ.ಎಂ.ಬಿ.ಕೋರಿ, ಡಾ.ಸೀಮಾ ಕೋರಿ ಮಾತನಾಡಿ, ಬಾಲ್ಯ ವಿವಾಹ ಸಮಾಜದಲ್ಲಿ ಕೆಟ್ಟ ಆಚರಣೆಯಾಗಿದೆ ಸಮಾಜಕ್ಕೆ ಇದೂಂದು ದೊಡ್ಡ ಪಿಡುಗಾಗಿ ಇವತ್ತಿಗೂ ಕಾಡುತ್ತಿದೆ, ಇದರ ವಿರುದ್ಧ ಜಾಗೃತಿ ಮೂಡಿಸಬೇಕು ಎಂದರು.
ಈ ಸಂದರ್ಭದಲ್ಲಿ ದಶರಥ ನಾಯಕ, ರಾಜೇಂದ್ರ ಯಾದವ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿಯರಾದ ಗುರುದೇವಿ ಹಿರೇಮಠ, ಸಂಗಮ್ಮ, ಶೋಭಾ ಸಜ್ಜನ, ಸರೋಜಿನಿ ,ಜಯಶ್ರೀ ಪಾಟೀಲ, ಸುನಂದಾ ಅಂಗನವಾಡಿ ಕಾರ್ಯಕರ್ತೆಯರು ಆಶಾ ಕಾರ್ಯಕರ್ತರು ಭಾಗವಹಿಸಿದ್ದರು.







