ಯಾದಗಿರಿ | ಕಾರ್ಮಿಕರೇ ದೇಶದ ಬೆನ್ನೆಲುಬು : ರಾಮಚಂದ್ರ ಬಸೂದೆ

ಯಾದಗಿರಿ : ದೇಶದ ಅಭಿವೃದ್ಧಿಗೆ ಕಾರ್ಮಿಕರ ಶ್ರಮವೇ ಆಧಾರವಾಗಿದೆ. ಕಾರ್ಮಿಕರೇ ದೇಶದ ಬೆನ್ನೆಲುಬು ಎಂದು ತಾಲೂಕು ಸಹಾಯಕ ನಿರ್ದೇಶಕ ರಾಮಚಂದ್ರ ಬಸೂದೆ ಅಭಿಪ್ರಾಯಪಟ್ಟರು.
ಗುರುಮಠಕಲ್ ತಾಲೂಕಿನ ಗಾಜರಕೋಟ ಗ್ರಾಮದ ಕೆರೆ ಹೂಳೆತ್ತುವ ಸ್ಥಳದಲ್ಲಿ ವಿಶ್ವಕಾರ್ಮಿಕರ ದಿನದ ಅಂಗವಾಗಿ ಕೂಲಿಕಾರರ ಜೊತೆ ಕೇಕ್ ಕತ್ತರಿಸಿ ಹಿರಿಯ ಕೂಲಿಕಾರರಿಗೆ ಸನ್ಮಾನಿಸಿ ಅವರು ಮಾತನಾಡಿದರು.
ದೇಶದ ಆರ್ಥಿಕ ಪ್ರಗತಿಗೆ ಕೂಲಿ ಕಾರ್ಮಿಕರ ಕಾರ್ಯ ಬಹಳ ಮುಖ್ಯವಾಗಿದೆ. ಪ್ರತಿಯೊಂದು ದೇಶದ ಆರ್ಥಿಕ ಅಭಿವೃದ್ಧಿ ಆ ದೇಶದ ಕಾರ್ಮಿಕರನ್ನು ಅವಲಂಬಿಸಿದೆ. ಕಾರ್ಮಿಕರಿಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ ಎಂದರು.
ಗಾಜರಕೋಟ ಮತ್ತು ಪಸಪೂಲ್ ಗ್ರಾಮ ಪಂಚಾಯತ್‌ಗಳಲ್ಲಿ ವಿಶ್ವ ಕಾರ್ಮಿಕ ದಿನದ ಅಂಗವಾಗಿ ಕೂಲಿ ಕಾರ್ಮಿಕರು ಕೇಕ್ ಕತ್ತರಿಸಿ, ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಬಿಎಫ್ ಟಿ ಯಂಕಣ್ಣ, ಮೇಟಿಗಳಾದ ಭೀಮರಾಯ, ಕಾಳಮ್ಮ ನಾಶಿ, ಐಇಸಿ ತಾಲೂಕು ಸಂಯೋಜಕ ರಾಘವೇಂದ್ರ ಹಾಗೂ ಪಂಚಾಯತಿ ಸಿಬ್ಬಂದಿಗಳು ಮತ್ತು ನರೇಗಾ ಕೂಲಿಕಾರ್ಮಿಕರು ಹಾಜರಿದ್ದರು.
Next Story





