ಯಾದಗಿರಿ | ಮೆಥೋಡಿಸ್ಟ್ ಸೆಂಟ್ರಲ್ ಚರ್ಚ್‌ನಲ್ಲಿ ವಿಶ್ವ ಅಪ್ಪಂದಿರ ದಿನಾಚರಣೆ

ಸುರಪುರ: ನಗರದ ಮೆಥೋಡಿಸ್ಟ್ ಸೆಂಟ್ರಲ್ ಚರ್ಚ್ ನಲ್ಲಿ ವಿಶ್ವ ಅಪ್ಪಂದಿರ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಜಿಲ್ಲಾ ಮೇಲ್ವಿಚಾರಕರಾದ ರೆವರೆಂಡ್ ಬಿ. ಜಯಪ್ಪ, ತಂದೆಯ ತ್ಯಾಗ, ಕುಟುಂಬದ ಸುಖಕ್ಕಾಗಿ ಆತ ಪಡುವ ಕಷ್ಟ ಮತ್ತು ನಿಸ್ವಾರ್ಥ ಪ್ರೀತಿಯ ಕುರಿತು ಮಾತನಾಡಿದರು. ದೇವರು ಸಹ ನಮ್ಮೆಲ್ಲರನ್ನು ತನ್ನ ಮಕ್ಕಳಂತೆ ಪ್ರೀತಿಸುತ್ತಾನೆ ಎಂದು ದೈವಸಂದೇಶ ನೀಡಿ ಎಲ್ಲರಿಗೋಸ್ಕರ ಪ್ರಾರ್ಥನೆ ಮಾಡಿದರು. ಸಭೆಯಲ್ಲಿರುವ ಅಪ್ಪಂದಿರಿಗೆ ಹೂ ಗುಚ್ಚ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಭಾಪಾಲಕರಾದ ರೆವರೆಂಡ್ ಪ್ರಕಾಶ ಹಂಚಿನಾಳ, ಸಭೆಯವರಾದ ಸಾಮುವೇಲ್ ಮ್ಯಾಥ್ಯೂ, ವಸಂತಕುಮಾರ, ಪಾಲ್ ನಾಯ್ಕ, ದೇವಪುತ್ರ, ಅಮಿತಪಾಲ್, ಧರ್ಮಣ್ಣ ತಂಗಪಾಂಡೆ, ಜಸ್ಟೀನ್ ಜಿಮ್ಮಿ, ಇಮಾನುವೆಲ್, ಥಾಮಸ ಮ್ಯಾಥ್ಯೂ, ವಿಜಯಕುಮಾರ, ಹನೋಕ್, ಸುಜಾತ, ಸುನೀಲಾ ಶಾಂತಕುಮಾರ, ಸುಕುಮಾರಿ, ಸಾಗರಿಕ, ಸರಿತಾ, ಶಾಲಿನಿ, ಶೋಭಾ, ಸುನೀತಾ, ಸ್ಟೆಲ್ಲಾ, ರೆಬೆಕ್ಕಾ, ರತ್ನಮ್ಮ, ಪವಿತ್ರಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Next Story





