ಯಾದಗಿರಿ | ಕಾರು ಢಿಕ್ಕಿಯಾಗಿ 12 ಕುರಿಗಳು ಸಾವು

ಯಾದಗಿರಿ: ಕಡೇಚೂರು ಗ್ರಾಮದ ಹೊರವಲಯದಲ್ಲಿ ಹಾದು ಹೋಗುವ ಯಾದಗಿರಿ-ರಾಯಚೂರು ರಾಷ್ಟ್ರೀಯ ಹೆದ್ದಾರಿ 150ರಲ್ಲಿ ಕುರಿ ಹಿಂಡಿಗೆ ಕಾರು ಢಿಕ್ಕಿಯಾಗಿ ಸುಮಾರು 12 ಕುರಿಗಳು ಸ್ಥಳದಲ್ಲೇ ಮೃತಪಟ್ಟಿದೆ. 14 ಕುರಿಗಳು ಗಂಭೀರವಾಗಿ ಗಾಯಗೊಂಡಿದೆ.
ಗುರುವಾರ ಬೆಳಗ್ಗೆ ಕುರಿಗಳು ರಸ್ತೆ ದಾಟುವಾಗ ರಾಯಚೂರು ಮಾರ್ಗವಾಗಿ ವೇಗವಾಗಿ ಬಂದ ಕಾರು ರಾಷ್ಟ್ರೀಯ ಹೆದ್ದಾರಿ ದಾಟುತ್ತಿದ್ದ ಕುರಿಗಳ ಹಿಂಡಿಗೆ ಢಿಕ್ಕಿ ಹೊಡೆದಿದೆ. ಮಲ್ಲಪ್ಪ ಚನ್ನಮಲ್ಲಪ್ಪ ತೋಳನೋರ್ ಹಾಗೂ ಮಲ್ಲಪ್ಪ ಮಲ್ಹಾ ಅವರಿಗೆ ಸೇರಿದ 12 ಕುರಿಗಳು ಸ್ಥಳದಲ್ಲೇ ಮೃತಪಟ್ಟಿವೆ. ಇದರ ಮೌಲ್ಯ 1ಲಕ್ಷ 40 ಸಾವಿರ ರೂ. ಎಂದು ಹೇಳಲಾಗಿದೆ.
Next Story





