ಯಾದಗಿರಿ | ಹಣದಾಸೆಗೆ ಮಗನಿಂದ ತಂದೆಯ ಹತ್ಯೆ

ಕೆಂಭಾವಿ : ಕ್ಷುಲ್ಲಕ ಕಾರಣಕ್ಕೆ ಮಗನಿಂದಲೇ ತಂದೆಯ ಹತ್ಯೆಗೈದ ಘಟನೆ ಕೆಂಭಾವಿ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.
ಚೆನ್ನಾರೆಡ್ಡಿ (48) ಮೃತ ವ್ಯಕ್ತಿ ಹಾಗೂ ಶೇಖರ ಬಂಧಿತ ಕೊಲೆ ಆರೋಪಿ ಎಂದು ತಿಳಿದು ಬಂದಿದೆ.
ಕೋಲೆ ಆರೋಪಿಯನ್ನು ಪಿ.ಎಸ್.ಐ ಅಮೋಜ್ ಕಾಂಬಳೆ ನೇತೃತ್ವದ ತಂಡ ಬಂದಿಸುವಲ್ಲಿ ಯಶಸ್ವಿಯಾಗಿದ್ದು, ಈ ಕೃತ್ಯವನ್ನು ಹಣದಾಸೆಗೆ ಮಗನಾದ ಶೇಖರ ಮಾಡಿದ್ದಾನೆ ಎಂದು ಪೋಲಿಸ್ ತನಿಖೆಯಿಂದ ತಿಳಿದು ಬಂದಿದೆ.
ಆರೋಪಿ ಶೇಖರ ರಾಠೋಡ ನನ್ನು ತಾಲೂಕು ಕಾರಾಗೃಹಕ್ಕೆ ಕಳುಹಿಸಲಾಗಿದೆ ಎಂದು ಪೋಲಿಸ್ ಇಲಾಖೆ ತಿಳಿಸಿದೆ.
Next Story





