ಯಾದಗಿರಿ: ಭ್ರಷ್ಟಾಚಾರ ವಿರುದ್ಧ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮ

ಯಾದಗಿರಿ: ಯಾದಗಿರಿ ಜಿಲ್ಲೆಯಲ್ಲಿ ಯಾವುದೇ ಸರ್ಕಾರಿ ಕಛೇರಿಗಳಲ್ಲಿ ಸರ್ಕಾರಿ ನೌಕರರು ಕೆಲಸ, ಸೇವೆಗಳನ್ನು ಮಾಡಿಕೊಡಲು ಲಂಚದ ಹಣಕ್ಕಾಗಿ ಒತ್ತಾಯಿಸಿದರೆ, ಅನಗತ್ಯ ವಿಳಂಬ ಮಾಡಿದರೆ, ಅಧಿಕಾರಿಗಳು ತಮ್ಮ ಹುದ್ದೆಯ ಅಧಿಕಾರ ದುರ್ಬಳಕೆ ಮಾಡಿಕೊಂಡು ಅವ್ಯವಹಾರದಲ್ಲಿ ಭಾಗಿಯಾಗಿದ್ದು, ಕಂಡುಬಂದಲ್ಲಿ ಯಾದಗಿರಿ ಕರ್ನಾಟಕ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರಾದ ಜೆ. ಎಚ್. ಇನಾಮದಾರ ಅವರು ಹೇಳಿದರು.
ಯಾದಗಿರಿ ನಗರದ ಇಂದು ಅ.28ರ ಮಂಗಳವಾರ ರಂದು ಜವಾಹರ ಬಿ.ಇ.ಎಡ್ ಪದವಿ ಮಹಾವಿದ್ಯಾಲಯದಲ್ಲಿ ಯಾದಗಿರಿ ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರು ನಿರ್ದೇಶನ ನೇತೃತ್ವದಲ್ಲಿ ಭ್ರಷ್ಟಾಚಾರ ವಿರುದ್ಧ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಹಾಗೂ ಜಾಗೃತಿ ಮೂಡಿಸಿ ಅವರು ಮಾತನಾಡಿದರು.
ಯಾವುದೇ ಸರ್ಕಾರಿ ಕಛೇರಿಗಳಲ್ಲಿ ಸರ್ಕಾರಿ ನೌಕರರು ಕೆಲಸ, ಸೇವೆಗಳನ್ನು ಮಾಡಿಕೊಡಲು ಲಂಚದ ಹಣಕ್ಕಾಗಿ ಒತ್ತಾಯಿಸಿದರೆ, ಅನಗತ್ಯ ವಿಳಂಬ ಮಾಡಿದರೆ, ಅಧಿಕಾರಿಗಳು ತಮ್ಮ ಹುದ್ದೆಯ ಅಧಿಕಾರ ದುರ್ಬಳಕೆ ಮಾಡಿಕೊಂಡು ಅವ್ಯವಹಾರದಲ್ಲಿ ಭಾಗಿಯಾಗಿದ್ದು, ಕಂಡುಬಂದಲ್ಲಿ ಯಾದಗಿರಿ ಕರ್ನಾಟಕ ಲೋಕಾಯುಕ್ತ ಪೊಲೀಸ್ ಠಾಣೆಗೆ ಮತ್ತು ಯಾದಗಿರಿ-585 202, ಹಳೆ ಬಸ್ ನಿಲ್ದಾಣ ಹತ್ತಿರ, ಕರ್ನಾಟಕ ಲೋಕಾಯುಕ್ತ ಕಛೇರಿ ಪೊಲೀಸ್ ಅಧೀಕ್ಷಕರು ಕಛೇರಿ ದೂ.ಸಂ.9364062529, 08473, 253802, 253355, ಸಂಪರ್ಕಿಸಿ ಮಾಹಿತಿ ನೀಡುವಂತೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು, ಅಲ್ಲದೇ ತಮ್ಮ ಸುತ್ತಮುತ್ತಲಿನ ಜನರಿಗೂ ಸಹ ಈ ಬಗ್ಗೆ ತಿಳುವಳಿಕೆ ನೀಡುವಂತೆ ಮತ್ತು ಲೋಕಾಯುಕ್ತ ಸಂಸ್ಥೆಯ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿಬೇಕು ಎಂದರು.
ಈ ಸಂದರ್ಭದಲ್ಲಿ ಲೋಕಾಯುಕ್ತ ಇನ್ಸ್ಪೆಕ್ಟರ್ ಸಂಗಮೇಶ, ಯಾದಗಿರಿ ಜವಾಹರ ಬಿ.ಇ.ಎಡ್ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಇಕ್ಬಾಲ್ ಶೇಖ್, ಉಪನ್ಯಾಸಕರಾದ ಜಾಫರ್.ಡಿ, ಉಪನ್ಯಾಸಕಿ ಶ್ರೀಮತಿ ಸಾಲಿಹ ನಿಖಾತ್, ಲೋಕಾಯುಕ್ತ ಸಿಬ್ಬಂದಿಗಳು, ಕಾಲೇಜು ಸಿಬ್ಬಂದಿ ಲಕ್ಷ್ಮಣರಾವ್ ಬಿರಾದಾರ ಉಪಸ್ಥಿತರಿದ್ದರು.







