Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಯಾದಗಿರಿ
  4. ಯಾದಗಿರಿ: ಬಸವಯುಗ ಗ್ರಂಥ ಯೋಜನೆ...

ಯಾದಗಿರಿ: ಬಸವಯುಗ ಗ್ರಂಥ ಯೋಜನೆ ಸಮಾಲೋಚನೆ ಸಭೆ

ಬಸವಾದಿ ಶರಣರ ಕುರಿತ ಸಮಗ್ರ ವಿಷಯವುಳ್ಳ ಬಸವಯುಗ ಗ್ರಂಥ: ಶ್ಯಾಮಲಿಂಗ ಜವಳಿ

ವಾರ್ತಾಭಾರತಿವಾರ್ತಾಭಾರತಿ18 Jun 2025 7:38 PM IST
share
ಯಾದಗಿರಿ: ಬಸವಯುಗ ಗ್ರಂಥ ಯೋಜನೆ ಸಮಾಲೋಚನೆ ಸಭೆ

ಸುರಪುರ: ಬಸವಣ್ಣನವರ ಜೀವನ ಚರಿತ್ರೆಯನ್ನು ಒಳಗೊಂಡ ಬಸವಯುಗ ಗ್ರಂಥ ರಚನೆಯ ಕುರಿತು ಕಳೆದ 1986 ರಿಂದ ಇಂದಿನವರೆಗೂ ಕಾರ್ಯ ನಡೆದಿದೆ. ಬಸವಾದಿ ಶರಣರ ಕುರಿತು ಸಮಗ್ರ ವಿಷಯದ ಗ್ರಂಥ ಇದಾಗಿದೆ ಎಂದು ಬಸವಯುಗ ಗ್ರಂಥ ಕರ್ತೃ ಶ್ಯಾಮಲಿಂಗ ಜವಳಿ ತಿಳಿಸಿದರು.

ನಗರದ ಬಸವಪ್ರಭು ತರಬೇತಿ ಕೇಂದ್ರದಲ್ಲಿ ನಡೆದ ಕೃತಿ ಯೋಜನೆ ಕುರಿತ ಸಮಾಲೋಚನೆ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಸವಯುಗ ಗ್ರಂಥವು ಬಸವಣ್ಣನವರ ಜೀವನದ 114 ಘಟನೆಗಳನ್ನು ಒಳಗೊಂಡ ಕೃತಿ ಇದಾಗಿದ್ದು, ಗ್ರಂಥವು ಶರಣರ ಜೀವನ, ಸಾಧನೆ,ಸಂಸ್ಕೃತಿ, ಸಾಹಿತ್ಯ, ದೇವರು, ಧರ್ಮ ಎಲ್ಲ ವಿಷಯಗಳನ್ನು ಗ್ರಂಥದಲ್ಲಿ ಕಾಣಬಹುದಾಗಿದೆ. ಗ್ರಂಥವು 800 ಪುಟಗಳದಾಗಿರಲಿದ್ದು, ಬಸವ ಪೂರ್ವ, ಬಸವಣ್ಣನ ಕಾಲ ಹಾಗೂ ಬಸವಣ್ಣನವರ ನಂತರ ಸಮಾಜದ ಕುರಿತು ಗ್ರಂಥದಲ್ಲಿ ವಿಷಯ ಇರಲಿದೆ,ಕೃತಿಯ ಬೆನ್ನುಡಿ ಶರಣ ಚಿಂತಕ ವೀರಣ್ಣ ರಾಜೂರ ಅವರು ರಚಿಸಲಿದ್ದಾರೆ.

ಇದೇ ಡಿಸೆಂಬರ್ 31 ರಂದು ಕೃತಿ ಎಲ್ಲರ ಕೈ ಸೇರಲಿದೆ. ಗ್ರಂಥ ಓದಿದ ನಂತರವೂ ಏನಾದರು ವಿಷಯ ಕೈಬಿಟ್ಟು ಹೋಗಿದ್ದರೆ ಯಾರಾದರು ತಿಳಿಸಿದಲ್ಲಿ ನಂತರ ಗ್ರಂಥದಲ್ಲಿ ಅದನ್ನೂ ಸೇರಿಸಲಾಗುವುದು ಎಂದು ವಿವರಿಸಿದರು.

ಕಲಬುರ್ಗಿಯ ಹಿರಿಯ ಚಿತ್ರ ಕಲಾವಿದ ಎ.ಎಸ್.ಪಾಟೀಲ್ ಮಾತನಾಡಿ,ಇದುವರೆಗೆ ಬಂದಿರುವ ಅನೇಕ ಗ್ರಂಥಗಳು ಕೃತಿ ರಚನೆಕಾರರ ವಿಷಯವನ್ನು ಮಾತ್ರ ಒಳಗೊಂಡಿದ್ದವು, ಆದರೆ ಬಸವಯುಗ ಗ್ರಂಥವು 21 ಜನ ಚಿತ್ರ ಕಲಾವಿದರ ಕಲೆಗಳು ಗ್ರಂಥದಲ್ಲಿ ಇರಲಿದ್ದು,ಕಲಾವಿದರು ಮತ್ತು ಲೇಖಕರನ್ನೊಳಗೊಂಡ ಕೃತಿ ಇದು ಏಕೈಕ ಎನ್ನಬಹುದಾಗಿದೆ ಎಂದರು.

ಸಾಹಿತಿ ಶ್ರೀನಿವಾಸ ಜಾಲವಾದಿ ಮಾತನಾಡಿ, ಒಂದು ಕೃತಿಗಾಗಿ ನಾಲ್ಕು ದಶಕಗಳ ಕಾಲ ನಿರಂತರವಾಗಿ ಕೆಲಸ ಮಾಡುತ್ತಿರುವುದು ನಂತರದಲ್ಲಿಯೂ ಏನಾದರು ಅದರಲ್ಲಿ ವಿಷಯ ಸೇರಿಸಬೇಕಿದ್ದರೆ ಅದಕ್ಕೂ ಅವಕಾಶ ನೀಡುವುದಾಗಿ ಹೇಳುವುದು ಒಬ್ಬ ನಿಜವಾದ ಸಾಹಿತಿಯ ತಾಕತ್ತಾಗಿದೆ. ಈ ಗ್ರಂಥ ಬಸವಣ್ಣನವರ ಕುರಿತಾದ ಒಂದು ದಾಖಲೆಯನ್ನು ಜಗತ್ತಿನಲ್ಲಿ ಉಳಿಸಿದಂತಾಗಲಿದೆ. ಗ್ರಂಥವನ್ನು ಓದಲು ತುಂಬಾ ಉತ್ಸಾಹ ಮೂಡುತ್ತಿದೆ ಎಂದರು.

ಬಸವಾದಿ ಶರಣರ ಕುರಿತು ನೋಡಿರುವ ಗ್ರಂಥಗಳು ಶರಣರ ಜೀವನ ಕುರಿತು,ವಚನ ಸಾಹಿತ್ಯದ ಕುರಿತು ತಿಳಿಸಿಕೊಟ್ಟರೆ ಶ್ಯಾಮಲಿಂಗ ಜವಳಿ ಅವರು ಬಸವಯುಗ ಗ್ರಂಥದ ಮೂಲಕ ದೇವರು,ಧರ್ಮ,ಸಂಸ್ಕೃತಿಯ ಕುರಿತು ತಿಳಿಸಲು ಮುಂದಾಗಿರುವುದು ತುಂಬಾ ಅಮೂಲ್ಯವಾದ ಕೃತಿಯಾಗಿದೆ,ಈ ಗ್ರಂಥದ ಪ್ರಕಟಣೆಗಾಗಿ 25 ಸಾವಿರ ರೂಪಾಯಿಗಳ ಜ್ಞಾನ ದಾಸೋಹಕ್ಕಾಗಿ ನೀಡುವೆ ಎಂದು ತಾ.ವೀರಶೈವ ಲಿಂಗಾಯತ ಸಮಿತಿ ಅಧ್ಯಕ್ಷ ಸುರೇಶ ಸಜ್ಜನ್ ಹೇಳಿದರು.

ಹಿರಿಯ ಸಾಹಿತಿ ಶಾಂತಪ್ಪ ಬೂದಿಹಾಳ,ಆಕಾಶವಾಣಿ ಕಲಾವಿದ ಅಮರಪ್ರಿಯ ಹಿರೇಮಠ ವೇದಿಕೆಯಲ್ಲಿದ್ದರು.ಇದೇ ಸಂದರ್ಭದಲ್ಲಿ ಸಗರನಾಡು ಸೇವಾ ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ಸಭೆಯ ಪ್ರಾಸ್ತಾವಿಕವಾಗಿ ಹಾಗೂ ಶರಣ ಸಾಹಿತ್ಯ ಪರಿಷತ್ ತಾಲೂಕ ಅಧ್ಯಕ್ಷ ರಾಜು ಕುಂಬಾರ,ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಮುಖಂಡ ಜಗದೀಶ ಪಾಟೀಲ ಸೂಗೂರ ಮಾತನಾಡಿದರು.

ಸಾಹಿತಿ ಶರಣಗೌಡ ಪಾಟೀಲ್ ಜೈನಾಪುರ ಸ್ವಾಗತಿಸಿದರು. ಶಿವರುದ್ರ ಉಳ್ಳಿ,ಚನ್ನಮಲ್ಲಿಕಾರ್ಜುನ ಗುಂಡಾನೂರ ವಚನ ಗಾಯನ ಮಾಡಿದರು.

ಸಭೆಯಲ್ಲಿ ಹಿರಿಯ ಚಿತ್ರ ಕಲಾವಿದರಾದ ಸಂಗಣ್ಣ ದೋರನಹಳ್ಳಿ,ಸಾಯಬಣ್ಣ ಮಡಿವಾಳ,ಶಿವಶರಣಪ್ಪ ಹೆಡಗಿನಾಳ,ಮಲ್ಲಿಕಾರ್ಜುನರಡ್ಡಿ ಅಮ್ಮಾಪುರ,ಪ್ರಕಾಶ ಹೆಮ್ಮಡಗಿ,ರಾಘವೇಂದ್ರ ಭಕ್ರಿ,ಪ್ರಕಾಶ ಬಣಗಾರ,ವೆಂಕಟೇಶ ರಾವೂರ,ಸಿದ್ದನಗೌಡ ಹೆಬ್ಬಾಳ ಸೇರಿದಂತೆ ಅನೇಕರು ಭಾಗವಹಿಸಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X