ಯಾದಗಿರಿ | ಹೋಳಿ ಹಬ್ಬದ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ. ಸೂಚನೆ

ಯಾದಗಿರಿ: 2025ರ ಮಾ.13 ರಿಂದ 14 ರಂದು ಹೋಳಿ ಹಬ್ಬವನ್ನು ಆಚರಿಸಲಾಗುತ್ತಿದ್ದು, ಈ ಹೋಳಿ ಹಬ್ಬದಂದು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಯಾದಗಿರಿ ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ. ಅವರು ತಿಳಿಸಿದ್ದಾರೆ.
ಹೋಳಿ ಹಬ್ಬದಲ್ಲಿ ಜಿಲ್ಲೆಯಾದ್ಯಂತ ಕಾನೂನು ಸುವ್ಯವಸ್ಥೆ ಹಾಗೂ ಯಾವುದೇ ಅಹಿತಕರ ಘಟನೆ ಆಗದಂತೆ ಸಾರ್ವಜನಿಕರ ಹಿತದೃಷ್ಟಿಯಿಂದ ಹೋಳಿಹಬ್ಬದ ಆಚರಣೆಯನ್ನು 2025ರ ಮಾ.13 ರಿಂದ 14ರ ವರೆಗೆ ಬೆಳಿಗ್ಗೆ 7 ಗಂಟೆಯಿಂದ ಪ್ರಾರಂಭಿಸಿ 1 ಗಂಟೆಗೆ ಮುಕ್ತಾಯಗೊಳಿಸಬೇಕು ಹಾಗೂ ಸಾರ್ವಜನಿಕ ಜಲಮೂಲಗಳಾದ ಕೆರೆ ಹಳ್ಳ ಭೂಮಿ ನದಿಗಳಲ್ಲಿ ಬಣ್ಣ ತೊಳಿದುಕೊಳ್ಳವುದು ಮತ್ತು ಈ ನೀರು ಕಲುಷಿತಗೊಳಿಸದಂತೆ ಸಾರ್ವಜನಿಕರು ಮುನ್ನೇಚ್ಚರಿಕೆ ವಹಿಸಿ ಶಾಂತಿಯುತವಾಗಿ ಹೋಳಿ ಹಬ್ಬ ಆಚರಿಸುವಂತೆ ಸೂಚಿಸಿದೆ.
2025ರ ಮಾ.13 ರಿಂದ 14ರ ವರೆಗೆ ಹೋಳಿ ಹಬ್ಬವನ್ನು ಆಚರಣೆಯ ಹಿನ್ನೆಲೆ ಈ ಹೋಳಿ ಹಬ್ಬದಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತೆ ಹಬ್ಬದ ಸಮಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಠಿಯಿಂದ ಎಲ್ಲಾ ವರ್ಗದ ಜನಾಂಗದವರಿಗೆ ಹೋಳಿ ಹಬ್ಬ ಆಚರಣೆಯಲ್ಲಿ ಶಾಂತಿ, ಸುವ್ಯವಸ್ಥೆತೆ ಕಾಪಾಡುವ ದೃಷ್ಠಿಯಿಂದ ನಗರದಲ್ಲಿ 2025ರ ಮಾ.13 ರಿಂದ 14ರ ವರೆಗೆ ಸಾರ್ವಜನಿಕರು ತಮ್ಮ ತಮ್ಮ ಮನೆಗಳ ಮುಂದೆ ಹಾಗೂ ರಸ್ತೆಗಳಲ್ಲಿ ಬಣ್ಣ ಆಡುವುದು.
ಆರೋಗ್ಯಕರವಾದ ಬಣ್ಣ ಮಾರಾಟ ಮಾಡಲು ಹಾಗೂ ಯಾವುದೇ ಕೆಮಿಕಲ್ಸ್ ಇಲ್ಲದ ಬಣ್ಣಗಳನ್ನು ಬಳಸುವಂತೆ ಮತ್ತು ಸಾರ್ವಜನಿಕರಿಗೆ ಒತ್ತಾಯ ಪೂರವಕವಾಗಿ ಬಣ್ಣವನ್ನು ಹಾಕದಂತೆ ಆಟೋದಲ್ಲಿ ವ್ಯಾಪಕ ಪ್ರಚಾರ ಮಾಡಲು ಹಾಗೂ ಈ ಹೋಳಿ ಹಬ್ಬದ ದಿನದಂದು, ಬಣ್ಣ ಆಡುವುದನ್ನು ಬೆಳಿಗ್ಗೆ 7 ಗಂಟೆಯಿಂದ ಪ್ರಾರಂಭಿಸಿ 1 ಗಂಟೆಗೆ ಮುಕ್ತಾಯಗೊಳಿಸಲು, ನಗರದ ಪ್ರಮುಖ ರಸ್ತೆಗಳಲ್ಲಿ ಸ್ವಚ್ಛತೆಯನ್ನು ಕಾಪಾಡಲು ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ 2025ರ ಮಾ.13 ರಿಂದ 14ರ ವರೆಗೆ ಹೋಳಿಹಬ್ಬ ಆಚರಿಸಲಾಗುತ್ತಿದ್ದು, 2025ರ ಮಾ.13 ರಂದು ಬೆಳಿಗ್ಗೆ 6 ಗಂಟೆಯಿAದ ಮಾ.15ರ ಬೆಳಿಗ್ಗೆ 6 ಗಂಟೆಯ ವರೆಗೆ ಮಧ್ಯಪಾನ ಹಾಗೂ ಮಧ್ಯ ಮಾರಾಟ ನಿಷೇಧಾಜ್ಞೆ ಜಾರಿಗೊಳಿಸಿ ಸೂಕ್ತ ಕ್ರಮ ಕೈಗೊಳ್ಳಲು ಆದೇಶಿಸಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.