ಯಾದಗಿರಿ| ಕೆಂಭಾವಿ ಪಟ್ಟಣದ ಭೋವಿ ವಡ್ಡರ ಸಮಾಜದ ನೂತನ ಪದಾಧಿಕಾರಿಗಳ ಆಯ್ಕೆ

ಕೆಂಭಾವಿ: ಪಟ್ಟಣದ ಭೋವಿ ವಡ್ಡರ ಸಮಾಜದ ಸಭೆ ಶನಿವಾರ ಸಂಜೆ ಶ್ರೀ ಸಂಜೀವು ಆಂಜನೇಯ ದೇವಸ್ಥಾನದಲ್ಲಿ ನಡೆಯಿತು. ಸಭೆಯಲ್ಲಿ ಕೆಂಭಾವಿ ಪಟ್ಟಣದ ಭೋವಿ ವಡ್ಡರ ಸಮಾಜದ ನೂತನ ಪದಾಧಿಕಾರಿಗಳನ್ನು ಸಮಾಜದ ಮುಖಂಡರ ಸಮ್ಮುಖದಲ್ಲಿ ಒಮ್ಮತದಿಂದ ಆಯ್ಕೆ ಮಾಡಲಾಯಿತು.
ನೂತನವಾಗಿ ಗೌರವ ಅಧ್ಯಕ್ಷರಾಗಿ ಯಂಕಪ್ಪ ಚಂದಾಪುರ, ಅಧ್ಯಕ್ಷರಾಗಿ ದೇವಪ್ಪ ಹಂದ್ರಾಳ, ಉಪಾಧ್ಯಕ್ಷರಾಗಿ ಮಂಜುನಾಥ್ ಎಚ್, ಕಾರ್ಯದರ್ಶಿಯಾಗಿ ವಿಜಯಕುಮಾರ, ಸಹ ಕಾರ್ಯದರ್ಶಿಯಾಗಿ ರಮೇಶ ಚಿಂಚೋಳಿ, ಸಂಚಾಲಕರಾಗಿ ರಾಜು ನಾಗಪ್ಪ ಅವರನ್ನು ಆಯ್ಕೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಕಾರ್ಯಕಾರಿ ಸದಸ್ಯರಾಗಿ ರಂಗಪ್ಪ ವಡ್ಡರ, ಬಸವರಾಜ ಮ್ಯಾಗೇರಿ, ಚಳಿಗೆಪ್ಪ ವಡ್ಡರ, ಮಾರುತಿ ಆರ್. ಭೋವಿ ಅವರನ್ನು ನೇಮಕ ಮಾಡಲಾಯಿತು.
ಸಭೆಯಲ್ಲಿ ಕುಮಾರ್ ಆರ್. ಭೋವಿ, ವೆಂಕಟೇಶ್ ಚಂದಾಪುರ, ಹಳ್ಳೆಪ್ಪ ವಡ್ಡರ, ಅಂಬರೀಶ ಮ್ಯಾಗೇರಿ, ಚಂದ್ರು ಚಿಂಚೋಳಿ, ಭೀಮಣ್ಣ ಭೈರಮಡ್ಡಿ, ಸೋಮು ಆಲ್ಹಾಳ, ಹುಸೇನಿ ಬಳ್ಳಾರಿ, ಮಂಜುನಾಥ ಚೌಕ, ದುರ್ಗಪ್ರಸಾದ, ಅಶೋಕ ವಣಕ್ಯಾಳ, ಮಾರುತಿ ವಣಕ್ಯಾಳ, ಗಂಗಾಧರ ಶಹಾಪುರ, ನಾಗಪ್ಪ ಕೊಡೆಕಲ್ಲ, ಸುರೇಶ ಶಿರವಾರ, ಪರಶುರಾಮ ರಾಯಚೂರು ಸೇರಿದಂತೆ ಇತರರು ಹಾಜರಿದ್ದರು.







