ಯಾದಗಿರಿ | ದಲಿತ ಸಂಘರ್ಷ ಸಮಿತಿಯ (ಅಂಬೇಡ್ಕರವಾದ) ಪದಾಧಿಕಾರಿಗಳ ಆಯ್ಕೆ
ಅನ್ಯಾಯದ ವಿರುದ್ಧ ಹೋರಾಟವೇ ನಮ್ಮ ಅಸ್ತ್ರವಾಗಬೇಕು; ಕಿರದಳ್ಳಿ

ಸೈದಾಪುರ : ಅನ್ಯಾಯದ ವಿರುದ್ಧ ಹೋರಾಟ ನಡೆಸಿ, ತುಳಿತ್ತಕ್ಕೊಳಗಾದವರ ಕಷ್ಟಕ್ಕೆ ತಕ್ಷಣ ಸ್ಪಂದನೆ ನೀಡುವುದೆ ಸಂಘಟನೆಯ ಗುರಿ ಎಂದು ದಲಿತ ಸಂಘರ್ಷ ಸಮಿತಿಯ (ಅಂಬೇಡ್ಕರವಾದ) ಜಿಲ್ಲಾ ಪ್ರಧಾನ ಸಂಚಾಲಕ ಮಾಳಪ್ಪ ಕಿರದಳ್ಳಿ ಅಭಿಪ್ರಾಯಪಟ್ಟರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ತಾಲ್ಲೂಕು ಸಮಿತಿ ಮತ್ತು ವಲಯ ಮಟ್ಟದ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರತಿಯೊಂದು ಸಮುದಾಯದ ಅಭಿವೃದ್ದಿಗೆ ಶಿಕ್ಷಣ ಅಗತ್ಯ. ಸಂಘಟನೆ ನಿಂತ ನೀರಾಗದೆ, ಸದಾ ಹರಿಯುತ್ತಿರುವ ನೀರಾಗಬೇಕು. ಬಾಬ ಸಾಹೇಬರ ಮೂಲ ಮಂತ್ರಗಳಾದ ಶಿಕ್ಷಣ , ಸಂಘಟನೆ, ಹೋರಾಟದ ಅಸ್ತ್ರಗಳನ್ನು ನಾವು ಸರಿಯಾದ ರೀತಿಯಲ್ಲಿ ಬಳಸಿಕೊಂಡಾಗ ನೊಂದವರಿಗೆ ನ್ಯಾಯ ದೊರೆಯುತ್ತದೆ. ಸಂಘಟನೆಯು ಜನಸಾಮಾನ್ಯರ ಕುಂದುಕೊರತೆಗಳನ್ನು ಗುರುತಿಸಿ ಅವುಗಳಿಗೆ ಸೂಕ್ತ ಪರಿಹಾರ ಕೊಡಿಸಲು ಪ್ರಯತ್ನಿಸಬೇಕು. ಇದರಿಂದ ಹಿಂದುಳಿದ ಸಮುದಾಯವು ಸಮಾಜದ ಮುಖ್ಯವಾಹಿನಿಗೆ ಬರಲು ಸಾದ್ಯವಾಗುತ್ತದೆ. ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳು ಪ್ರತಿ ಗ್ರಾಮದ ಜನರ ಸಮಸ್ಯೆಗಳನ್ನು ಆಲಿಸಿ ಅವುಗಳಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಪ್ರತಿಯೊಬ್ಬರಿಗೂ ಮುಟ್ಟುವಂತೆ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.
ನೂತನ ಪದಾಧಿಕಾರಿಗಳು ತಾಲ್ಲೂಕು ಮತ್ತು ವಲಯ ಸಮಿತಿ :
ಪ್ರಧಾನ ಸಂಚಾಲಕರಾಗಿ ಆಂಜನೇಯ ಬಳಿಚಕ್ರ, ಮಲ್ಲಿಕಾರ್ಜುನ ಸಂಗವಾರ, ಅನಿಲ ಅನ್ವಾರ್, ವಿಜಯ ಕುಮಾರ, ಮಲ್ಲು ಕಾಗೇರಿ, ತಾಯಪ್ಪ ಲಿಂಗೇರಿ, ಬುಗ್ಗಪ್ಪ ಹಳಿಗೇರಿ, ಶಿವರಾಜ ಗೊಂದೆಡಗಿ, ವಲಯಮಟ್ಟದ ಪ್ರಧಾನ ಸಂಚಾಲಕರಾಗಿ ಚನ್ನಮಲ್ಲಪ್ಪ ಚೇಗುಂಟಿ ಕ್ಯಾತನಾಳ, ಆಜಪ್ಪ ಸಂಗವಾರ, ಮರಿಲಿಂಗಪ್ಪ ಕುದುರಿ ರಾಚನಳ್ಳಿ, ಹನುಮಂತ ಶೆಟ್ಟಿಹಳ್ಳಿ, ಹನುಮಂತ ಗೊಂದೆಡಗಿ, ಬಸವರಾಜ ನಾಗರಬಂಡಿ, ಶರಣಪ್ಪ ಸಂಗವಾರ, ಭೀಮಾಶಂಕರ ಮುನಗಾಲ, ಸೇರಿದಂತೆ ಉಳಿದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಜಿಲ್ಲಾ ಪ್ರಧಾನ ಸಂಚಾಲಕರ ನೇತೃತ್ವದಲ್ಲಿ ನಡೆಯಿತು.
ಇದಕ್ಕೂ ಮೊದಲು ಕೊಂಡಾಪುರ, ಸಂಗವಾರ, ಮುನಗಾಲ, ಕೂಡ್ಲೂರು, ರಾಚನಳ್ಳಿ, ಶೆಟ್ಟಿಹಳ್ಳಿ, ಬೆಳಗುಂದಿ, ಲಿಂಗೇರಿ, ನಾಗರಬಂಡಿ, ಕ್ಯಾತನಾಳ, ಬಳಿಚಕ್ರ, ಸೈದಾಪುರದಿಂದ ಗ್ರಾಮ ಘಟಕದ ಸದಸ್ಯರು ನೂತನ ಪದಾಧಿಕಾರಿಗಳ ಸಭೆಗೆ ಆಗಮಿಸಿದ್ದರು.
ಈ ಸಂದರ್ಭದಲ್ಲಿ ವಿಭಾಗ ಸಂಘಟನಾ ಸಂಚಾಲಕ ಮರಳ ಸಿದ್ದಪ್ಪ ನಾಯ್ಕಲ್, ಜಿಲ್ಲಾ ಸಂಘಟನಾ ಸಂಚಾಲಕರಾದ ಮರಿಲಿಂಗಪ್ಪ ಬದ್ದೇಪಲ್ಲಿ, ಭೀಮರಾಯ ಬಳಿಚಕ್ರ, ಬಸವರಾಜ ಅಣಬಿ, ಪರಶುರಾಮ ರೋಜಾ, ನಿಂಗಪ್ಪ ಬೀರನಾಳ, ದೇವಿಂದ್ರಪ್ಪ ಕೂಡ್ಲೂರು, ವಿವಿಧ ಗ್ರಾಮ ಘಟಕಗಳ ಪದಾಧಿಕಾರಿಗಳು ಸೇರಿದಂತೆ ಇತರರಿದ್ದರು.







