ಯಾದಗಿರಿ| ವಿಕಲಚೇತನರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ

ಯಾದಗಿರಿ: ಪ್ರತಿಯೊಬ್ಬ ವಿಕಲಚೇತನರು ಸರಕಾರದ ಸೌಲಭ್ಯಗಳ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಗ್ರಾಮದ ಹಿರಿಯರಾದ ಸಂಗಪ್ಪಗೌಡ ಐರೆಡ್ಡಿ ಅಭಿಪ್ರಾಯಪಟ್ಟರು.
ಸೈದಾಪುರ ಸಮೀಪದ ಕೂಡ್ಲೂರು ಗ್ರಾಮದಲ್ಲಿ ಅಂಗವಿಕಲರ ದಿನಾಚರಣೆ ಅಂಗವಾಗಿ ಮಂಗಳವಾರ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ, ಗ್ರಾಮೀಣ ಅಂಗವಿಕಲರ ಪುರ್ನವಸತಿ ಕಾರ್ಯಕ್ರಮ, ದಿ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ ಯಾದಗಿರಿ ಇವರ ಸಂಯುಕ್ತಾಶ್ರಯದಲ್ಲಿ ವಿಕಲಚೇತನರ ಸಾಮರ್ಥ್ಯ ನಿರ್ಮಾಣ, ಸಮೀಕ್ಷೆ ಮತ್ತು ಪುನಶ್ಚೇತನದ ಅರಿವಿನ ಕಾರ್ಯಗಾರ ಮತ್ತು ಉಚಿತ ಆರೋಗ್ಯ ಶಿಬಿರದಲ್ಲಿ ಭಾಗವಹಿಸಿ ಸಂಗಪ್ಪಗೌಡ ಐರೆಡ್ಡಿ ಮಾತನಾಡಿದರು.
ಸೈದಾಪುರ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಉಮಾದೇವಿ ಮಾತನಾಡಿ, ಹಿರಿಯ ನಾಗರಿಕರಿಗೆ, ವಿಕಲಚೇತನರಿಗೆ ಹಾಗೂ ಬೆಳವಣಿಗೆ ಕುಂಟಿತ ಮಕ್ಕಳಿಗೆ ಮನೆಯಲ್ಲಿರುವವರು ಉತ್ತಮ ಸಹಕಾರ ನೀಡಬೇಕು. ಅವರ ಆರೋಗ್ಯದ ಹಿತದೃಷ್ಠಿಯಿಂದ ಸರಕಾರ ಸಾಕಷ್ಟು ಯೋಜನೆಗಳನ್ನು, ನಿಯಮಗಳನ್ನು, ಸೌಲಭ್ಯಗಳನ್ನು ನೀಡುತ್ತಿದೆ. ಅವುಗಳ ಉಪಯೋಗವನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬನ್ನಪ್ಪ, ಶಿವಯೋಗಪ್ಪ, ವಿಶ್ವನಾಥರೆಡ್ಡಿ, ಚಂದ್ರಶೇಖರ್, ಶಂಕರಪ್ಪ ದೆಸಾಯಿ, ಎಪಿಡಿ ಸಂಸ್ಥೆಯ ತಾಲೂಕು ಸಂಯೋಜಕ ರಮೇಶ ಕಟ್ಟಿಮನಿ, ಪ್ರಿಯಾದರ್ಶನಿ, ರಮೇಶ್ ನಾಯಕ್, ವೈಷ್ಣವಿ, ಶರಣಪ್ಪ, ಮಲ್ಲಿಕಾರ್ಜುನ, ರಮೇಶ, ಖಂಡಪ್ಪ, ನಾಗ್ರೇಂದ್ರಪ್ಪ ಕುಂಬಾರ, ಮಿಶಾಲ್ ಎಲಿಜೆಬೆತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.







