ಯಾದಗಿರಿ | ಧೂಳು ತಡೆಗೆ ಕ್ರಮ ಕೈಗೊಳ್ಳುವಂತೆ ನಗರಸಭೆಗೆ ಕನ್ನಡ ರಕ್ಷಣಾ ವೇದಿಕೆ ಆಗ್ರಹ

ಯಾದಗಿರಿ: ನಗರದ ವಿವಿಧ ರಸ್ತೆಗಳಲ್ಲಿ ಅತಿಭಾರದ ವಾಹನಗಳ ಸಂಚಾರದಿಂದಾಗಿ ವ್ಯಾಪಕವಾಗಿ ಧೂಳು ಆವರಿಸುತ್ತಿದ್ದು ಇದರಿಂದ ಜನಸಾಮಾನ್ಯರಿಗೆ ಅಸ್ತಮಾದಂತಹ ರೋಗಗಳ ಭೀತಿ ಉಂಟಾಗಿದೆ. ಆದ್ದರಿಂದ ಧೂಳು ನಿಯಂತ್ರಿಸಲು ಕ್ರಮವನ್ನು ಕೈಗೊಳ್ಳಬೇಕು ಎಂದು ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ನಾಗಪ್ಪ ಬಿ ಆಗ್ರಹಿಸಿದರು.
ಕರವೇ ಅಧ್ಯಕ್ಷ ನಾಗಪ್ಪ ಬಿ.ಹೊನಗೇರಾ ಮಾತನಾಡಿ, ಈಗಾಗಲೇ ಲಿಖಿತ ರೂಪದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿರುವುದಿಲ್ಲ. ವಾಹನಗಳ ಸಂಚಾರ ಹೆಚ್ಚಳವಾಗಿರುವುದರಿಂದ ಅದರಲ್ಲೂ ಅತಿಭಾರದ ಲಾರಿಗಳು ಓಡಾಟದಿಂದಾಗಿ ನಗರದಲ್ಲಿ ಹೆಚ್ಚಿನ ಧೂಳಿನ ಸಮಸ್ಯೆ ಉಂಟಾಗಿದೆ. ವಿಶೇಷವಾಗಿ ಹತ್ತಿಕುಣಿ ರಸ್ತೆ, ಡಿಸಿ ಕಚೇರಿ ರಸ್ತೆ, ನೇತಾಜಿ ಸುಭಾಶ್ಚಂದ್ರ ಬೋಸ್ ರಸ್ತೆ, ಹಳೆ, ಹೊಸ ಬಸ್ ನಿಲ್ದಾಣ ಸೇರಿದಂತೆ ಪ್ರಮುಖ ರಸ್ತೆ ಹಾಗೂ ತಾಣಗಳಲ್ಲಿ ಧೂಳು ಹೆಚ್ಚಾಗಿದೆ. ನಗರಸಭೆ ಧೂಳು ನಿಯಂತ್ರಿಸಲು ವಿಶೇಷ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
Next Story





