ಯಾದಗಿರಿ| ಖಾಸಗಿ ಶಿಕ್ಷಣ ಸಂಸ್ಥೆಗಳ ಅಕ್ರಮದ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಕರವೇ ಒತ್ತಾಯ

ಯಾದಗಿರಿ: ಜಿಲ್ಲೆಯಾದ್ಯಂತ ವಿಶೇಷವಾಗಿ ನಗರದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಣದ ಹೆಸರಿನಲ್ಲಿ ವಸೂಲಿ ಧಂದೆ ನಡೆಸಿದ್ದು ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಎಚ್ಚೆತ್ತು ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ ಆಗ್ರಹಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಟಿ.ಎನ್. ಭೀಮುನಾಯಕ, ಶಿಕ್ಷಣ ನೀಡಬೇಕಾದ ಸಂಸ್ಥೆಗಳ ಶಾಲಾ ಕಾಲೇಜುಗಳು ಹಣ ವಸೂಲಿ ದಂಧೆ ನಡೆಸುತ್ತಿದ್ದು, ವರ್ಷಪೂರ್ತಿ ಪುಸ್ತಕ, ಯುನಿಫಾರ್ಮ್, ಸಾಮಗ್ರಿಗಳ ಹೆಸರಿನಲ್ಲಿ ಕೇವಲ ವಸೂಲಿ ಮಾಡುವ ಕೆಲಸಕ್ಕಿಳಿದಿದ್ದಾರೆ.
ಆದರೆ ಮೂಲಸೌಕರ್ಯಗಳು ಮಾತ್ರ ಮರಿಚಿಕೆಯಾಗಿದ್ದು, ಸರಕಾರದ ನಿಯಮಾವಳಿಗಳ ಪ್ರಕಾರ ಯಾವುದೇ ಸೌಕರ್ಯವನ್ನು ನೀಡದೇ ಕೇವಲ ಡೋನೆಷನ್ ಸೇರಿದಂತೆ ಇನ್ನಿತರ ಬಾಬ್ತುಗಳ ಹೆಸರಿನಲ್ಲಿ ಬರಿ ವಸೂಲಿ ಧಂದೆಯಲ್ಲಿ ನಿರತರಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಡೋನೇಶನ್ ಹಾವಳಿಯಿಂದಾಗಿ ಬಡ ಹಿಂದುಳಿದವರ ಮಕ್ಕಳು ಉತ್ತಮ ಗಣುಮಟ್ಟದ ಶಿಕ್ಷಣ ಕನಸಿನ ಮಾತಾಗಿದ್ದು, ಅವರ ಮಕ್ಕಳು ಶಾಲೆ ಬಿಟ್ಟು ಮನೆಯುಲ್ಲಿ ಕೂರುವಂತಾಗಿದೆ. ಇದಲ್ಲದೇ ಬಹುತೇಕ ಸಂಸ್ಥೆಗಳ ಶಾಲಾ ಕಾಲೇಜುಗಳು ಮನೆಯಲ್ಲಿ ಇಲ್ಲವೇ ರೂಮುಗಳಲ್ಲಿ ನಡೆಸುತ್ತಿದ್ದು, ಅನುಮತಿ ಪಡೆಯುವಾಗ ತೋರಿಸಿದ ಮಾಹಿತಿಗೂ ವಾಸ್ತವದ ಮಾಹಿತಿಗೂ ಅಜಗಜಾಂತರ ವ್ಯತ್ಯಾಸವಿದ್ದು, ಇವರು ಕೇವಲ ಶಿಕ್ಷಣ ಸಂಸ್ಥೆಯ ಹೆಸರಿನಲ್ಲಿ ವ್ಯಾಪಾರದಲ್ಲಿ ತೊಡಗಿಕೊಂಡಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಹಲವು ಶಿಕ್ಷಣ ಸಂಸ್ಥೆಗಳಲ್ಲಿ ಬೇಸಿಗೆ ಶಿಬಿರಗಳ ಹೆಸರಿನಲ್ಲಿ ವಸೂಲಿ ದಂಧೆಯಲ್ಲಿ ತೊಡಗಿಸಿಕೊಂಡಿರುತ್ತಾರೆ.
ಯಾದಗಿರಿ ಜಿಲ್ಲೆ ಶಿಕ್ಷಣದಲ್ಲಿ ಹಿಂದುಳಿದಿದೆ ಎಂಬ ಕಾರಣಕ್ಕೆ ಶಿಕ್ಷಣ ಸಂಸ್ಥೆಗಳಿಗೆ ಪ್ರೋತ್ಸಾಹ ನೀಡಿದ್ದರೂ ಸಹ ಗುಣಮಟ್ಟದ ಶಿಕ್ಷಣದ ಕಡೆ ಗಮನ ಹರಿಸುವುದರ ಬದಲಿಗೆ ಕೇವಲ ವ್ಯಾಪಾರದ ಮನೋವೃತ್ತಿಯನ್ನು ಪ್ರದರ್ಶಿಸಿರುವುದು ನಡೆಯುತ್ತಿದೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಮಲ್ಲು ಮಾಳಕೇರಿ, ಸಿದ್ದು ನಾಯಕ ಹತ್ತಿಕುಣಿ, ಅಂಬೇಷ್ ಹತ್ತಿಮನಿ, ಸಂತೋಷ ನಿರ್ಮಲಕರ್, ವಿಶ್ವಾರಾಜ ಪಾಟೀಲ್, ಭೀಮಾಶಂಕರ ಹತ್ತಿಕುಣಿ, ನಿಂಗಪ್ಪ ಗುಡಗುಡಿ, ಅಬ್ದುಲ್ ಚಿಗಾನೂರ, ವೆಂಕಟೇಶ ನಾಯಕ ಬೈರಿಮಡ್ಡಿ, ಶರಣಬಸಪ್ಪ ಯಲ್ಹೇರಿ, ಬಸವರಾಜ ಚೆನ್ನೂರ, ಅಂಬ್ರೇಷ್ ಕಟ್ಟಿಮನಿ, ರವಿ ನಾಯಕ, ಕಾಶಿನಾಥ ನಾನೇಕ, ಮರೆಪ್ಪ ಕಡ್ಡಿ, ರಮೇಶ ಡಿ. ನಾಯಕ ಉಪಸ್ಥಿತರಿದ್ದರು.






