ಯಾದಗಿರಿ | ಡಾ.ಬಾಬು ಜಗಜೀವನ್ ರಾಮ್ ರವರ 118ನೇ ಜಯಂತಿಯ ಸಮಿತಿ ಅಧ್ಯಕ್ಷರಾಗಿ ಹತ್ತಿಮನಿ ಆಯ್ಕೆ

ಯಾದಗಿರಿ : ಹಸಿರು ಕ್ರಾಂತಿ ಹರಿಕಾರ ಭಾರತದ ಉಪ ಪ್ರಧಾನ ಮಂತ್ರಿ ಡಾ.ಬಾಬು ಜಗಜೀವನರಾಂ ಅವರ 118ನೇ ಜನ್ಮ ದಿನಾಚರಣೆಯ ಪ್ರಯುಕ್ತ ಪೂರ್ವ ಭಾವಿ ಸಭೆಯನ್ನು ಯಾದಗಿರಿ ನಗರದ ಡಾ.ಬಾಬು ಜಗಜೀವನರಾಮ್ ಭವನದಲ್ಲಿ ಗುರುವಾರ ಬೆಳಿಗ್ಗೆ ಜರುಗಿತು.
ಮಾದಿಗ ಸಮುದಾಯದ ವಿವಿಧ ಸಂಘಟನೆಯ ಎಲ್ಲಾ ಪದಾಧಿಕಾರಿಗಳು, ಹೋರಾಟಗಾರರು, ಸಾಹಿತಿಗಳು, ನಿವೃತ್ತ ಅಧಿಕಾರಿಗಳು, ಹಾಲಿ ಹಾಗೂ ಮಾಜಿ ಜನ ಪ್ರತಿನಿಧಿಗಳು, ವಿದ್ಯಾರ್ಥಿಗಳು ಹಾಗೂ ಎಲ್ಲಾ ಮುಖಂಡರುಗಳು ಭಾಗಿಯಾಗಿ ಒಮ್ಮತದ ಮೇರೆಗೆ ಜಯಂತಿ ಸಮಿತಿಯ ಅಧ್ಯಕ್ಷರನ್ನಾಗಿ ಲಿಂಗಪ್ಪ ಹತ್ತಿಮನಿ ರವರನ್ನು ಉಪಾಧ್ಯಕ್ಷರನ್ನಾಗಿ, ಬಸವರಾಜ್ ನಾಯ್ಕಲ್, ಪ್ರಧಾನ ಕಾರ್ಯದರ್ಶಿಯಾಗಿ ಭೀಮಾಶಂಕರ್ ಆಲ್ದಾಳ್, ಖಜಾಂಚಿಯಾಗಿ ಮೈಲಾರಪ್ಪ ಜಾಗೀರ್ ದಾರ್ ರನ್ನು ಹಾಗೂ ಗೌರವ ಅಧ್ಯಕ್ಷರನ್ನಾಗಿ ಪರಮೇಶ್ ರಡ್ಡಿ ಕಂದಕೂರ್ ಅವರನ್ನು ಒಮ್ಮತದಿಂದ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಮಾಜದ ಹಿರಿಯ ಮುಖಂಡರುಗಳಾದ ಮಾಜಿ ಅಲೆಮಾರಿ ಹಾಗೂ ಅರೆ ಅಲೆಮಾರಿ ಅಧ್ಯಕ್ಷ ದೇವಿoದ್ರನಾಥ್ ನಾದ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಖಂಡಪ್ಪ ದಾಸನ್, ಎಮ್, ಕೆ,ಬೀರನೂರ್, ಯಲ್ಲಪ್ಪ ಮಾಳಿಕೇರಿ, ಶಾಂತರಾಜ್ ಮೊಟ್ನಳ್ಳಿ,ಡಾ, ಭೀಮರಾಯ ಲಿಂಗೇರಿ, ಗೋಪಾಲ ದಾಸನ್, ನಿಂಗಪ್ಪ ವಡ್ನಳ್ಳಿ, ಚನ್ನಪ್ಪ ಮಾಳಿಕೇರಿ, ಡಾ,ಶಿವಪ್ಪ ಮುದ್ನಾಳ್, ನಾಗರಾಜ ಬೀರನೂರ್, ಹಣಮಂತ ಲಿಂಗೇರಿ, ಆಂಜನೇಯ ಬಬಲಾದಿ, ಸುಖದೇವ್, ಸುಬೆದಾರ್, ಭೀಮರಾಯ ಹಬ್ಬಳ್ಳಿ,ಸದಾಶಿವಪ್ಪ ದನಕಾಯಿ, ನಾಗರಾಜ ದಾಸನಕೇರಿ, ಸುಭಾಸ್ ಮಾಳಿಕೇರಿ,ಮಲ್ಲಪ್ಪ ದೊಡ್ದಮನಿ,ಶಿವಶರಣ ಮುದ್ನಾಳ್,ರಾಜು,ಎದುರುಮನಿ,ಹಣಮಂತ ವಡಿಗೇರಾ, ಸಾಬಣ್ಣ ಸೈದಾಪೂರ್, ಚಂದ್ರು ಕಡೆಸೂರ್, ಸಲ್ಮೋನ್ ಯಡ್ಡಳ್ಳಿ, ಅಶೋಕ್ ದನಕಾಯಿ, ವಿಜಯಕುಮಾರ್ ಕೊನಿಮನಿ,ಸೇರಿದಂತೆ ಇನ್ನಿತರ ಮುಖಂಡರು ಭಾಗವಹಿಸಿದ್ದರು.