ಯಾದಗಿರಿ | ಮುಚ್ಚು ಹರಾಜು ಕಟ್ಟೆ ಕಾಮಗಾರಿಗೆ ಶಾಸಕ ಚೆನ್ನಾರಡ್ಡಿ ಪಾಟೀಲ್ ತುನ್ನೂರು ಭೂಮಿ ಪೂಜೆ

ಯಾದಗಿರಿ : ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ರೈತರ ಹಾಗೂ ವರ್ತಕರ ಉತ್ಪನ್ನಗಳು ಮಳೆಯಿಂದ ಬಿಸಿಲಿನಿಂದ ಹಾಳಾಗದಂತೆ ರಕ್ಷಣೆ ಮಾಡಲು ಆರ್‌ಐಡಿಎಫ್ ಯೋಜನೆ 29 ಅಡಿಯಲ್ಲಿ ಮುಚ್ಚು ಹರಾಜು ಕಟ್ಟೆ ಕಾಮಗಾರಿಯನ್ನು 2.5 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಂಡು ಭೂಮಿ ಪೂಜೆಯನ್ನು ಯಾದಗಿರಿ ಮತಕ್ಷೇತ್ರದ ಶಾಸಕರಾದ ಚೆನ್ನಾರೆಡ್ಡಿ ಗೌಡ ತುನ್ನೂರ ಅವರು ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಯಾದಗಿರಿ ಕೃಷಿ ಉತ್ಪನ್ನ ಮಾರುಕಟ್ಟೆಯ ಪ್ರಾಂಗಣದಲ್ಲಿ ರೈತರೂ ಬೆಳೆದಂತ ಕೃಷಿ ಉತ್ಪನ್ನಗಳಿಗೆ ಉತ್ತಮ ಸ್ಪರ್ಧಾತ್ಮಕ ದರ ದೊರಕಿಸಿಕೊಡಲು ಎಪಿಎಂಸಿ ವತಿಯಿಂದ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸಿಸಿ ರಸ್ತೆ, ಚರಂಡಿ, ದಾರಿದೀಪ ,ಕುಡಿಯುವ ನೀರು ವಿದ್ಯುತ್ ಕಂಬ ಇನ್ನು ಹತ್ತು ಹಲವು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಕ್ರಿಯಾಯೋಜನೆಯನ್ನು ತಯಾರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಎಪಿಎಂಸಿ ವರ್ತಕರ ಮತ್ತು ರೈತರ ಉಪಯೋಗಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಯಾವುದೇ ತರಹದ ಸೌಲತ್ತುಗಳನ್ನು ಬೇಕಾದಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಒದಗಿಸಿಕೊಡಲಾಗುವುದು ಹಾಗೂ ವರ್ತಕರ ಯಾವುದೇ ಕುಂದುಕೊರತೆಗಳಿಗೆ ಸದಾ ನಾನು ಸ್ಪಂದಿಸುತ್ತೇನೆ ಯಾವುದೇ ಸಮಸ್ಯೆಗಳಿದ್ದರೂ ನನ್ನನ್ನು ನೇರವಾಗಿ ಸಂಪರ್ಕಿಸಬಹುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಕಾರ್ಯದರ್ಶಿ ಶಿವಕುಮಾರ ದೇಸಾಯಿ ಕಾರ್ಯನಿರ್ವಾಹಕ ಅಭಿಯಂತರರು, ಎಸ್ ಎಸ್ ಜಾಗೀರ್ದಾರ್ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ವಾಗ್ಮೊರೆ, ಕಿರಿಯ ಅಭಿಯಂತರರು ರಾಕೇಶ್, ಸಹಾಯಕ ಕಾರ್ಯದರ್ಶಿ ರಿಯಾಜುದ್ದೀನ್, ಅನ್ಸಾರಿ ವರ್ತಕರ ಸಂಘದ ಅಧ್ಯಕ್ಷರಾದ ಸೋಮನಾಥ ಜೈನ ಬಾಬು ಸೆಟ್ ದೋಖಾ, ದಿನೇಶ್ ಕುಮಾರ್ ಧೋಖಾ, ವಿಶ್ವನಾಥರೆಡ್ಡಿ ಜೋಳದಡಗಿ, ವಿನೋದಕುಮಾರ್ ಭಂಡಾರಿ, ಮಲ್ಲಣ್ಣಗೌಡ ಬಿಲ್ಹಾರ್ ವೆಂಕಟ್ ರೆಡ್ಡಿ ತಂಗಡಗಿ, ಮಲ್ಲಣ್ಣ ಮುಂಡರಗಿ, ರವಿಶಂಕರ್ ಕಂದಕೂರ, ಬಸವಂತರಾಯಗೌಡ ಮಲ್ಹಾರ, ಗುತ್ತಿಗೆದಾರರಾದ ಮೈನುದ್ದೀನ್ ಇತರರು ಹಾಜರಿದ್ದರು.







