ಯಾದಗಿರಿ | 134 ನೇ ಡಾ.ಅಂಬೇಡ್ಕರ್ ಜಯಂತಿ ಸಮಿತಿಯ ಅಧ್ಯಕ್ಷರಾಗಿ ನರೇಂದ್ರ ಕುಮಾರ ಅನವಾರ ಆಯ್ಕೆ

ಯಾದಗಿರಿ : ಭಾರತ ರತ್ನ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ 134ನೇ ಜಯಂತಿ ಸಮಿತಿಯ ಅಧ್ಯಕ್ಷರಾಗಿ ನರೇಂದ್ರ ಅನವಾರ ಅವರನ್ನು ಆಯ್ಕೆ ಮಾಡಲಾಯಿತು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ 134ನೇ ಜಯಂತೋತ್ಸವದ ಶಾಂತಿಯುತ ಪೂರ್ವಭಾವಿ ಸಭೆಯಲ್ಲಿ ನಗರದ ಹಿರಿಯ ಮುಖಂಡರ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಗೌರವ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಕುರಕುಂಬಳಕರ್, ಉಪಾಧ್ಯಕ್ಷರಾಗಿ ಮಂಜುನಾಥ ದಾಸನಕೇರಿ, ಪ್ರಧಾನ ಕಾರ್ಯದರ್ಶಿಯಾಗಿ ರಮೇಶ ಸುಂಗಲಕರ್, ಖಜಾಂಚಿಯಾಗಿ ಚಂದ್ರಕುಮಾರ ಛಲವಾದಿ, ನಿಂಗಪ್ಪ ಬೀರನಾಳ, ಅವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ನಗರದ ಹಿರಿಯ ಮುಖಂಡರಾದ ಸಾಬಣ್ಣ ಸುಂಗಲಕರ್, ಮರೆಪ್ಪ ಚಟ್ಟೇರಕರ್, ಡಾ.ಭಗವಂತ ಅನವಾರ, ಗೋಪಾಲ ತೆಳಗೇರಿ, ಮಹೇಶ ಕುರಕುಂಬಳಕರ್, ಮಲ್ಲಿಕಾರ್ಜುನ ಈಟೇ, ಶರಣು ಎಸ್ ನಾಟೇಕಾರ್, ಗುರುಲಿಂಗಪ್ಪ ಕಟ್ಟಿಮನಿ, ಪರಶುರಾಮ ಒಡೆಯರ್, ಸುರೇಶ್ ಬೀರನಾಳ, ಕೈಲಾಸ ಅನವಾರ, ಸೇರಿದಂತೆ ಅನೇಕರು ಇದ್ದರು.
Next Story





