ಯಾದಗಿರಿ | ನೂತನ ಆಂಬುಲೆನ್ಸ್‌ಗಳ ಲೋಕಾರ್ಪಣೆ

ಸುರಪುರ : ನಗರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹಾಗೂ ಹುಣಸಗಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಮಂಜೂರಾಗಿರುವ ಆಂಬುಲೆನ್ಸ್‌ಗಳನ್ನು ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶಾಸಕ ರಾಜಾ ವೇಣುಗೋಪಾಲ್ ನಾಯಕ್ ಲೋಕಾರ್ಪಣೆಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಆರ್ ವಿ ನಾಯಕ್, ನಮ್ಮ ವಿಧಾನಸಭಾ ಕ್ಷೇತ್ರದ ಹಲವು ಕಡೆಗಳಲ್ಲಿ ತಾಯಿ ಮಕ್ಕಳ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಈಗಾಗಲೇ ಎರಡು ದಿನಗಳಿಂದ ವಿವಿಧ ಗ್ರಾಮಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಲಾಗಿದೆ. ಇದಲ್ಲದೆ ಇನ್ನು ಮುಂದೆ ಸುರಪುರದಲ್ಲಿ ಆಂಬುಲೆನ್ಸ್ ಸೇವೆ ದೊರೆಯಲಿದೆ. ಹುಣಸಗಿಯ ಸಮುದಾಯ ಆರೋಗ್ಯ ಕೇಂದ್ರಕ್ಕೂ ಆಂಬುಲೆನ್ಸ್ ನೀಡಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ಆರ್ ವಿ ನಾಯಕ್, ಕೆವೈಡಿಸಿಸಿ ಅಧ್ಯಕ್ಷ ವಿಠಲ ಯಾದವ್, ತಾಲೂಕು ವಕ್ಕಲುತನ ಹುಟ್ಟುವಳಿ ಮಾರಾಟಗಾರ ಸಹಕಾರ ಸಂಘದ ಅಧ್ಯಕ್ಷ ರಾಜಾ ಸಂತೋಷ್ ನಾಯಕ್, ಯೂಥ್ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ರಾಜಾ ಕುಮಾರ್ ನಾಯಕ್, ಮಲ್ಲಣ್ಣ ಸಾಹುಕಾರ್ ನರಸಿಂಗಪೇಟ, ದೊಡ್ಡ ದೇಸಾಯಿ ದೇವರಗೋನಾಲ, ಗುಂಡಪ್ಪ ಸೋಲಾಪುರ, ಬೀರಲಿಂಗ ಬಾದ್ಯಾಪೂರ, ರಾಘವೇಂದ್ರ ಗೆದ್ದಲಮರಿ, ಶಕೀಲ್ ಅಹ್ಮದ್ ಖುರೇಶಿ, ಗೋಪಾಲ ಗುತ್ತೇದಾರ್, ನಾಸೀರ್ ಕುಂಡಾಲೆ, ಅಬ್ದುಲ್ ಅಲಿಮ್ ಗೋಗಿ, ಮಾರ್ಥಂಡಪ್ಪ ದೇವರಗೋನಾಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.







