ಯಾದಗಿರಿ | ಡ್ರಗ್ಸ್ ಕುರಿತು ವಿದ್ಯಾರ್ಥಿ ಸಮುದಾಯಕ್ಕೆ ಅರಿವು ಮೂಡಿಸುವುದೇ ನಮ್ಮ ಗುರಿ: ಶರಣಪ್ಪ ಸಲಾದಪುರ

ಶಹಾಪುರ: ಸದೃಢ ಭಾರತ ನಿರ್ಮಾಣದಲ್ಲಿ ವಿದ್ಯಾರ್ಥಿಗಳ, ಯುವ ಸಮುದಾಯದ ಪಾತ್ರ ಪ್ರಮುಖವಾಗಿದ್ದು, ಅವರಿಗೆ ಮದ್ಯಪಾನ, ಡ್ರಗ್ಸ್, ಗಾಂಜಾ ಸೇರಿದಂತೆ ನಾನಾ ವ್ಯಸನಗಳಿಂದ ದೂರವಿರಲು ನಿರಂತರವಾಗಿ ಅರಿವು ಮೂಡಿಸುವುದೇ ಮಂಡಳಿಯ ಗುರಿಯಾಗಿದೆ ಎಂದು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲಾದಪುರ ಹೇಳಿದರು.
ತಾಲೂಕಿನ ಗೋಗಿ ಗ್ರಾಮದ ದರ್ಗಾಕ್ಕೆ ಭೇಟಿ ನೀಡಿ ಧಾರ್ಮಿಕ ಮುಖಂಡರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಶರಣಪ್ಪ ಸಲಾದಪುರ, ಮುಂದಿನ ದಿನಗಳಲ್ಲಿ ಪ್ರತಿ ಹಳ್ಳಿಯೂ ವ್ಯಸನ ಮುಕ್ತವಾಗಬೇಕಾದರೇ ಮೊದಲು ವಿದ್ಯಾರ್ಥಿ-ಯುವ ಸಮುದಾಯವನ್ನು ಎಚ್ಚರಗೊಳಿಸಬೇಕಿದೆ. ಈ ನಿಟ್ಟಿನಲ್ಲಿ ನಾವು ಕಾರ್ಯನಿರ್ವಸಲಿದ್ದೇವೆ ಎಂದು ತಿಳಿಸಿದರು.
ಹಝರತ್ ಸೈಯದ್ ಇಸ್ಮಾಯಿಲ್ ಹುಸೇನಿ, ಹಝರತ್ ಸೈಯದ್, ಕಲಿಮುಲ್ಲಾ ಹುಸೇನಿ ಸಜ್ಜದಾ, ನಶೀನ್ ದರ್ಗಾ ಹಝರತ್, ಸೈಯದ್ ಚಂದಾ ಹುಸೈನಿ ಗೋಗಿ, ಬಸವರಾಜಪ್ಪ ಗೌಡ ಗೋಗಿ, ಮೋಹನರೆಡ್ಡಿ ಗೋಗಿ ಉಪಸ್ಥಿತರಿದ್ದರು.
ಮಂಡಳಿ ಅಧ್ಯಕ್ಷರಾಗಿ ಮೊದಲ ಬಾರಿಗೆ ಶಹಾಪುರಕ್ಕೆ ಆಗಮಿಸಿದ್ದ ಶರಣಪ್ಪ ಸಲಾದಪೂರಗೆ ಯಾದಗಿರಿ ಜಿಲ್ಲಾ ಸಹಕಾರಿ ಯೂನಿಯನ್ ಒಕ್ಕೂಟದ ಅಧ್ಯಕ್ಷ ವಿಶ್ವನಾಥರಡ್ಡಿ ದರ್ಶನಾಪೂರ ಅಭಿನಂದಿಸಿರು.
ಈ ಸಂದರ್ಭದಲ್ಲಿ ಒಕ್ಕೂಟದ ಉಪಾಧ್ಯಕ್ಷ ಎಂ.ನಾರಾಯಣ, ಸರಕಾರಿ ನೌಕರರು ಸಂಘದ ಗೌರವ ಅಧ್ಯಕ್ಷ ಶಾಂತರಡ್ಡಿ ತುಂಬಗಿ, ಶರಣಗೌಡ ಬಲಟಿಗಿ ಹಾಗೂ ರಾಯಚೂರು ಜಿಲ್ಲೆಯ ರೈತ ಹೋರಾಟಗಾರರು ಉಪಸ್ಥಿತರಿದ್ದರು.







