ಯಾದಗಿರಿ| ಕುಡಿಯುವ ನೀರಿಗಾಗಿ ಕೋನ್ಹಾಳ ಗ್ರಾಮಸ್ಥರಿಂದ ಪ್ರತಿಭಟನೆ

ಸುರಪುರ: ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಕೋನ್ಹಾಳ ಗ್ರಾಮದ ಜನರು ದೇವತ್ಕಲ್ ಗ್ರಾಮ ಪಂಚಾಯಿತಿ ಮುಂದೆ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಮುಖಂಡರು, ಗ್ರಾಮದಲ್ಲಿ 200ಕ್ಕೂ ಹೆಚ್ಚು ಮನೆಗಳಿದ್ದು ಕುಡಿಯುವ ನೀರಿನ ಸಮಸ್ಯೆ ಉಂಟಾಗಿ ಜನರು ಪರದಾಡುವಂತಾಗಿದೆ. ಗ್ರಾಮದಲ್ಲಿನ ವಿವಿಧ ವಾರ್ಡ್‌ಗಳಲ್ಲಿ ಬಾವಿಗಳಾಗಲಿ ಕೊಳವೆಬಾವಿಗಳಾಗಲಿ ಯಾವುದು ಇಲ್ಲದ್ದರಿಂದಾಗಿ ಸಾರ್ವಜನಿಕರು ತುಂಬಾ ಸಮಸ್ಯೆಯನ್ನು ಅನುಭವಿಸುವಂತಹಾಗಿದೆ. ಜಾನುವಾರುಗಳು ಕೂಡ ನೀರಿಲ್ಲದೆ ಎರಡು ಕಿಲೋಮೀಟರ್ ದೂರ ಹೋಗಿ ನೀರು ಕುಡಿಯುವಂತಹ ಸ್ಥಿತಿ ಉಂಟಾಗಿದೆ.
ಬೇಸಿಗೆ ಆಗಿರುವುದರಿಂದ ಸಮಸ್ಯೆ ಇನ್ನಷ್ಟು ಹೆಚ್ಚುತ್ತಿದ್ದು ಕೂಡಲೇ ಗ್ರಾಮಕ್ಕೆ ಅಧಿಕಾರಿಗಳು ಭೇಟಿ ನೀಡಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಬೇಕು ಇಲ್ಲವಾದಲ್ಲಿ ಖಾಲಿ ಕೊಡಗಳೊಂದಿಗೆ ಸಾರ್ವಜನಿಕರು ತೀವ್ರ ಪ್ರತಿಭಟನೆಯನ್ನು ನಡೆಸಲಿದ್ದೇವೆ ಎಂದು ಎಚ್ಚರಿಸಿದರು. ನಂತರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಬಸವರಾಜ ಹಾದಿಮನಿ, ಸಿದ್ದಣ್ಣ, ಶಂಕ್ರಪ್ಪ ಪೂಜಾರಿ, ಹೈಯ್ಯಾಳಪ್ಪ ಪೂಜಾರಿ, ಈರಪ್ಪ ಪೂಜಾರಿ, ನಿಂಗಪ್ಪ ಪೂಜಾರಿ, ಹೈಯ್ಯಾಳಪ್ಪ ಎಮ್.ಪೂಜಾರಿ, ಬಸಣ್ಣ ಪೂಜಾರಿ, ಶರಬಣ ಗೌಡ ದೇವತ್ಕಲ್, ಮಲ್ಲಣ್ಣ ಪೂಜಾರಿ, ನಿಂಗಪ್ಪ ಪೂಜಾರಿ, ಪರಮಣ್ಣ ಪೂಜಾರಿ, ವಗ್ಗಪ್ಪ ಪೂಜಾರಿ ,ಅಶೋಕ ಪೂಜಾರಿ ,ಕರೆಪ್ಪ , ಈರಣ್ಣ ಪೂಜಾರಿ, ಸಹದೇವಪ್ಪ ಬೆಣ್ಣಿ, ದೇವೇಂದ್ರಪ್ಪ ಬಾಕ್ಲಿ , ಸುರೇಶ ಪೂಜಾರಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.






