ಯಾದಗಿರಿ | ಕುಡಿಯುವ ನೀರಿಗಾಗಿ ನಗರಸಭೆ ಮುಂದೆ ಪ್ರತಿಭಟನೆ

ಸುರಪುರ: ನಗರದ ಗೌತಮ್ ಬುದ್ಧ ನಗರ ಹಾಗೂ ದರ್ಶನ ಬುದ್ಧ ವಿಹಾರದಲ್ಲಿ ಇರುವ ಕುಡಿಯುವ ನೀರಿನ ಟ್ಯಾಂಕ್ ಗೆ ನೀರು ತುಂಬಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕ್ರಾಂತಿಕಾರಿ ಬಣದಿಂದ ನಗರಸಭೆ ಮುಂದೆ ಪ್ರತಿಭಟನೆ ನಡೆಸಲಾಗಿದೆ.
ಸಂಘಟನೆ ರಾಜ್ಯ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಮಾತನಾಡಿ, ಅನೇಕ ವರ್ಷಗಳ ಹಿಂದೆ ಬುದ್ಧ ನಗರದಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಿಸಲಾಗಿದ್ದು ಅದಕ್ಕೆ ಇದುವರೆಗೂ ಕೂಡ ನೀರು ತುಂಬಿಸುತ್ತಿಲ್ಲ, ದರ್ಶನ ಬುದ್ಧ ವಿಹಾರ ಸೇರಿದಂತೆ ಬುದ್ದ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಮೂಲಕ ನೀರು ಸರಬರಾಜು ಮಾಡುವಂತೆ ಆಗ್ರಹಿಸಿದರು.
ಬುದ್ಧ ನಗರದಲ್ಲಿ ಮಹಿಳಾ ಶೌಚಾಲಯವನ್ನು ನಿರ್ಮಿಸುವಂತೆ ಒತ್ತಾಯಿಸಿದರು. ಅಲ್ಲದೆ ಮಹಾತ್ಮ ಗೌತಮ್ ಬುದ್ಧ ವೃತ್ತದಲ್ಲಿ ಕುಡಿಯುವ ನೀರಿನ ನಳವನ್ನು ಅಳವಡಿಸಲು ಒತ್ತಾಯಿಸಿದರು.
ನಂತರ ನಿವೃತ್ತ ಪ್ರೊಫೆಸರ್ ಮಾನು ಗುರಿಕಾರ ಅವರು ಮನವಿ ಪತ್ರವನ್ನು ಓದಿ ಪೌರಾಯುಕ್ತರಿಗೆ ಬರೆದ ಮನವಿ ವ್ಯವಸ್ಥಾಪಕ ಯಲ್ಲಪ್ಪ ನಾಯಕ ಅವರ ಮೂಲಕ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆ ತಾಲೂಕು ಸಂಚಾಲಕ ಬಸವರಾಜ ದೊಡ್ಡಮನಿ, ಮುಖಂಡರಾದ ಮಾನಪ್ಪ ಬಿಜಾಸಪುರ, ವೀರಭದ್ರ ತಳವರಗೇರಾ, ರಾಮಣ್ಣ ಶೆಳ್ಳಗಿ, ದುರ್ಗಪ್ಪ ಅರಳಳ್ಳಿ, ತಿಪ್ಪಣ್ಣ ಗೋನಾಲ, ಮಹೇಶ ಯಾದಗಿರಿ, ಮಹಾದೇವಪ್ಪ ಬಿಜಾಸಪುರ, ಮಲ್ಲಿಕಾರ್ಜುನ ತಳ್ಳಳ್ಳಿ, ಬಸವರಾಜ ಗೋನಾಲ ಅಜೀಜ್ ಸಾಬ್ ಐಕೂರ್, ಮಲ್ಲಿಕಾರ್ಜುನ ಶಾಖನವರ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.







