ಯಾದಗಿರಿ | ಹೋಳಿ ಸಂಭ್ರಮದ ಅಂಗವಾಗಿ ರತಿ ಮನ್ಮಥರ ಪೂಜೆ ; ಮೆರವಣಿಗೆ

ಸುರಪುರ : ಹೋಳಿ ಹಬ್ಬದ ಅಂಗವಾಗಿ ನಗರದ ನಗರಸಭೆ ಬಳಿಯಲ್ಲಿ ರತಿ ಮನ್ಮಥರ ಮೂರ್ತಿಗಳಿಗೆ ಪೂಜೆ ಸಲ್ಲಿಸಿ ನಂತರ ಕಬಾಡಗೇರಾದ ವರೆಗೆ ಭವ್ಯ ಮೆರವಣಿಗೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಹಿರಿಯರಾದ ಶರಣಯ್ಯ ಸ್ವಾಮಿ ಮಠಪತಿ ಮಾತನಾಡಿ, ಮೆರವಣಿಗೆ ಮೂಲಕ ಹೋಳಿ ಹಬ್ಬವನ್ನು ಸಗರ ನಾಡಿನಲ್ಲಿ ಅದ್ದೂರಿಯಾಗಿ ಆಚರಿಸಲಾಗುತ್ತದೆ. ಹೋಳಿ ಹಬ್ಬದ ಹಾಡು ಗಳು ಆಡುತ್ತಾ ಸ್ನೇಹಿತರು, ಬಂಧು ಬಳಗದವರು ಮನೆಗಳಿಗೆ ಹೋಗಿ ಬಣ್ಣ ಹಚ್ಚಿ ಹಬ್ಬ ವನ್ನು ಅದ್ದೂರಿಯಾಗಿ ಆಚರಿಸುತ್ತಾರೆ.
ಮುಖಂಡರಾದ ಬಸವರಾಜು ಹೂಗಾರ, ಶಂಕರ್ ಕಳ್ಳಿಮನಿ,ಆನಂದ್ ಹೂಗಾರ,ಗೋಪಾಲ ಮೂಲಿಮನಿ, ಭೀಮಾಶಂಕರ್ ಕಳ್ಳಿಮನಿ, ಮಹೇಶ್ ಮಂಗಲಿಗಿ, ವಿಜಯಕುಮಾರ್ ಹಳಿಸಗರ,ಮೋಹನ್ ಪತ್ತಾರ್, ಮಹೇಶ ಹಳ್ಳದ, ರಾಹುಲ್ ಹಳಿಸಗರ, ಕುಮಾರ ನಾಯಕ, ವಿನೀತ್ ಬಣಗಾರ ,ಲಾಲ್ ಸಿಂಗ್, ಮಲ್ಲಿಕಾರ್ಜುನ್ ಬೇವಿನಕಟ್ಟಿ, ರಾಕೇಶ್ ಪತ್ತಾರ್, ನಿತೀಶ್ ಸೀರಗೋಜಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.
Next Story