ಯಾದಗಿರಿ | ವಿಶೇಷ ಸಾಹಸ ಕಲೆ ಪ್ರದರ್ಶಿಸಿದ ವಿದ್ಯಾರ್ಥಿ ಅನ್ವಿತ್ ಅಂಬರೀಶ ಜಾಕಾ

ಯಾದಗಿರಿ: ಇಲ್ಲಿನ ನವನಂದಿ ಶಾಲೆಯಲ್ಲಿ ಆಯೋಜಿಸಿದ್ದ ಪ್ಲ್ಯಾಂಕ್ ಹೊಲ್ಡ್ ಚಾಲೆಂಜಿಂಗ್ ಕಂಡಕ್ಟ್ ಆನ್(ಹೊಟ್ಟೆ ಹಲಗೆ) ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಏಳು ವಿದ್ಯಾರ್ಥಿಗಳ ಪೈಕಿ 10 ವರ್ಷದ ಅನ್ವಿತ್ ಅಂಬರೀಶ ಜಾಕಾ ಎಂಬ ವಿದ್ಯಾರ್ಥಿ ಅತ್ಯಧಿಕ ಸಮಯ 35 ನಿಮಿಷ, 30 ಸೆಕೆಂಡ್‌ಗಳವರೆಗೂ ತನ್ನ ಕಲಿಕೆಯ ಸಾಧನೆ ಪ್ರದರ್ಶನ ಮಾಡುವ ಮೂಲಕ ಹೊಸ ದಾಖಲೆ ಬರೆದಿದ್ದಾನೆಂದು ಶಾಲೆಯ ಮುಖ್ಯ ಶಿಕ್ಷಕ ರೇವಣಸಿದ್ದಪ್ಪ ಮಲಕೂಡ ತಿಳಿಸಿದ್ದಾರೆ.
ಇದೇ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಾದ ಸಿದ್ದಾರ್ಥ ರವಿಕುಮಾರ 12 ನಿಮಿಷ, 30 ಸೆಕೆಂಡ್ ಹಾಗೂ ಜೈನಿಶ್ ರವಿಂದ್ರ 5 ನಿಮಿಷ, 36 ಸೆಕೆಂಡವರೆಗೂ ತಮ್ಮ ಈ ಸಾಹಸ ಕಲೆಯನ್ನು ಪ್ರದರ್ಶಿಸಿದ್ದಾರೆಂದು ಅವರು ಹೇಳಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಬಸವರಾಜ ಶಿವರಾಯ, ಕರಾಟೆ ತರಬೇತಿದಾರರಾದ ಪೂಜಾ ಚವ್ಹಾಣ ಹಾಗೂ ಶಿಕ್ಷಕರು ಸಂತಸ ವ್ಯಕ್ತಪಡಿಸಿದ್ದಾರೆ.
Next Story





