ಯಾದಗಿರಿ | ಮಾರಕಾಸ್ತ್ರಗಳಿಂದ ಕೊಚ್ಚಿ ಇಬ್ಬರ ಹತ್ಯೆ : ಪ್ರಕರಣ ದಾಖಲು

ಮೃತಪಟ್ಟವರು
ಯಾದಗಿರಿ : ಇಬ್ಬರು ವ್ಯಕ್ತಿಗಳ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಹತ್ಯೆಗೈದಿರುವ ಪ್ರತ್ಯೇಕ ಘಟನೆ ರವಿವಾರ ಬೆಳಿಗ್ಗೆ ಶಹಾಪುರ ತಾಲ್ಲೂಕಿನಲ್ಲಿ ನಡೆದಿದೆ.
ಸಾದ್ಯಪುರ ಕ್ರಾಸ್ ಹತ್ತಿರ ಮಾಪಣ್ಣ ಬಡಿಗೇರ (52), ಮದ್ರಿಕಿ ಹತ್ತಿರ ಅಲ್ಲಿಸಾಬ ಬಡೇಸಾಬ್ ಮದ್ರಿಕಿ ( 55) ಮೃತ ಪಟ್ಟವರು ಎಂದು ತಿಳಿದು ಬಂದಿದೆ.
ಇಬ್ಬರನ್ನೂ ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಹತ್ಯೆಗೈದು ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೈಕ್ ಮೇಲೆ ಶಹಾಪುರದಿಂದ ಸ್ವಗ್ರಾಮ ತೆರಳುವಾಗ ಮಾರ್ಗ ಮಧ್ಯೆ ಮದ್ರಿಕಿ ಮತ್ತು ಸಾದ್ಯಾಪುರ್ ಬಳಿ ಬೈಕ್ ಅಡ್ಡಗಟ್ಟಿ ಕೊಲೆ ಮಾಡಲಾಗಿದೆ ಎನ್ನಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಶಹಾಪುರದ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಈ ಕುರಿತು ಶಹಾಪುರ ತಾಲ್ಲೂಕಿನ ಬಿ ಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





