ಯಾದಗಿರಿ | ಡೇ ಎನ್‌ಯುಎಲ್‌ಎಂ ಅಭಿಯಾನದಡಿ ನಗರದ ವಸತಿ ರಹಿತರು ಆಶ್ರಯ ಪಡೆದುಕೊಳ್ಳಲು ಉಮೇಶ ಚವ್ಹಾಣ ಸಲಹೆ

ಯಾದಗಿರಿ: ಡೇ ಎನ್‌ಯುಎಲ್‌ಎಂ ಅಭಿಯಾನದಡಿ ನಗರದ ವಸತಿ ರಹಿತರು ಆಶ್ರಯ ಉಪಘಟಕದಡಿ ಆಶ್ರಯ ಪಡೆದುಕೊಳ್ಳಬೇಕು ಎಂದು ಯಾದಗಿರಿ ನಗರಸಭೆ ಪೌರಾಯುಕ್ತರು ಉಮೇಶ ಚವ್ಹಾಣ ಅವರು ತಿಳಿಸಿದ್ದಾರೆ.
ಯಾದಗಿರಿ ನಗರಸಭೆ ವ್ಯಾಪ್ತಿಯಲ್ಲಿ ಡೇ ಎನ್‌ಯುಎಲ್‌ಎಂ ಅಭಿಯಾನದ ನಗರದ ವಸತಿ ರಹಿತರಿಗೆ ಆಶ್ರಯ ಉಪಘಟಕದಡಿ ನಗರದ ವಸತಿ ರಹಿತರಿಗೆ ಹಾಗೂ ಕೆಲಸದ ನಿಮಿತ್ಯ ಯಾದಗಿರಿಗೆ ಆಗಮಿಸುವ ನೂರಾರು ಬಡ ಕೂಲಿ ಕಾರ್ಮಿಕರು ಬಸ್ ನಿಲ್ದಾಣ, ಖಾಲಿ ಇರುವ ಕಟ್ಟಡ, ಪುಟ್‌ಪಾತ್ ಮೇಲೆ ರಾತ್ರಿ ಕಳೆಯುವ ದ್ಯಶ್ಯ ನಿತ್ಯವೂ ಕಾಣಿಸುತ್ತದೆ ಹಾಗೂ ಕೆಲಸ ಅರಸಿ ನಿತ್ಯ ನಗರಕ್ಕೆ ಆಗಮಿಸಿವವರಲ್ಲಿ ಬಹಳಷ್ಟು ಜನರಿಗೆ ನೆಲೆ ಇರುವುದಿಲ್ಲ. ಅವರಿಗೆ ನಿತ್ಯ ಲಾಡ್ಜ್ ಗಳಲ್ಲಿ ಉಳಿಯುವುದು ವೆಚ್ಚದಾಯಕವಾಗುತ್ತದೆ. ಇದರಿಂದ ಎಷ್ಟೋ ಜನರು ನಗರದ ಬಸ್ ನಿಲ್ದಾಣದಲ್ಲಿ ರೈಲ್ವೇ ಸ್ಟೇಷನ್‌ಗಳಲ್ಲಿ ರಾತ್ರಿ ಕಳೆಯುತ್ತಿದ್ದಾರೆ.
ಈ ವರ್ಗದ ಜನರಿಗೆ ಅನುಕೂಲಕ್ಕಾಗಿ ಜಿಲ್ಲಾಡಳಿತ, ಯಾದಗಿರಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆ, ಮತ್ತು ಯಾದಗಿರಿ ನಗರಸಭೆ ಇವರ ಸಂಯುಕ್ತಾಶ್ರಯದಲ್ಲಿ ಯಾದಗಿರಿ ನಗರದ ರೈಲ್ವೇ ಸ್ಟೇಷನ್ ಹತ್ತಿರ, ಶಹಾಪೂರ ರಸ್ತೆ ಯಾದಗಿರಿ (ಮೀನು ಮಾರುಕಟ್ಟೆ ಕಟ್ಟಡದ ಎದುರುಗಡೆ) ನಗರ ವಸತಿ ರಹಿತರ ಆಶ್ರಯ ಕೇಂದ್ರವನ್ನು ಸ್ಥಾಪಿಸಿ ನೂತನ ಕಟ್ಟಡದಲ್ಲಿ ವಾರ್ಷಿಕ ನಿರ್ವಹಣೆಗಾಗಿ ಭಾರತಾಂಭೆ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ (ರಿ) ಯಾದಗಿರಿ ಇವರಿಗೆ ವಹಿಸಿಲಾಗಿರುತ್ತದೆ.
ಸಾರ್ವಜನಿಕರು ಈ ಆಶ್ರಯ ಕೇಂದ್ರದಲ್ಲಿ ಉಳಿದುಕೊಳ್ಳಬೇಕು, (ಆಶ್ರಯ) ಪಡೆಯಲು ಕಾರ್ಯದರ್ಶಿ ಭೀಮಾಶಂಕರ ದೊಡ್ಡಮನಿ ದೂ.ಸಂ. 9740187796, ಕೇರ್ ಟೇಕರ್ ಬೀರಲಿಂಗಪ್ಪ ಕಿಲ್ಲನಕೇರಾ ಮೊ.ನಂ.8722276167ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







