ಯಾದಗಿರಿ | ಕೃಷ್ಣಾ ನದಿಯಿಂದ ಏತನೀರಾವರಿ ಮಾಡಿ ರೈತರ ಜಮೀನಿಗೆ ನೀರು ಒದಗಿಸಲು ಶಾಸಕರಿಗೆ ಮನವಿ

ಯಾದಗಿರಿ: ಜಿಲ್ಲೆಯಲ್ಲಿ ಕೃಷ್ಣ ಹಾಗೂ ಭೀಮ ನದಿಗಳಿದ್ದರೂ, ರೈತರ ಜಮೀನುಗಳಿಗೆ ನೀರಿಲ್ಲದೆ ಮಳೆಯಾಶ್ರಿತ ಬೆಳೆ ಬೆಳೆಯುತ್ತಿದ್ದಾರೆ. ರೈತರಿಗೆ ಸಮಯಕ್ಕೆ ಸರಿಯಾಗಿ ಮಳೆ ಬಾರದೆ ರೈತರು ತುಂಬ ಸಂಕಷ್ಟ ಅನುಭವಿಸುತ್ತಿದ್ದಾರೆ. ಆದ್ದರಿಂದ ಯಕ್ಷಿಂತಿ ಗ್ರಾಮಕ್ಕೆ ಮೂಲಸೌಕರ್ಯ ಕಲ್ಪಿಸಲು ಹಾಗೂ ರೈತರಿಗೆ ಕೊಳ್ಳೂರ ಕೃಷ್ಣ ನದಿಯಿಂದ ಏತನೀರಾವರಿ ಮಾಡಿ ನೀರು ಒದಗಿಸಲು ಯಕ್ಷಿಂತಿ ಗ್ರಾಮಸ್ಥರಿಂದ ಶಾಸಕ ಚೆನ್ನರೆಡ್ಡಿ ಪಾಟೀಲ್ ತುನ್ನುರು ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಮಹಿಳಾ ಘಟಕದ ರಾಜ್ಯಾಧ್ಯಕ್ಷ ನಾಗರತ್ನ ವಿ ಪಾಟೀಲ್, sdmc ಅಧ್ಯಕ್ಷ ಹಣಮಂತ ದೊಡ್ಮನಿ, ಶರಣಗೌಡ ಚಿಕ್ಕಮೇಟಿ, ಮಲ್ಲರಾಯಗೌಡ, ದೇವಣ್ಣ ಪೂಜಾರಿ, ನಿಂಗಣ್ಣ ದೊರೆ, ಯಂಕಪ್ಪ ಬಂಗಾರಿ, ಮಲ್ಲಣ ಕಾವಲಿ, ಹೈಯ್ಯಾಳಪ್ಪ ಸೋತೆನೋರ, ಹಣಮಂತ ದೊರಿ, ನಿಂಗಣ್ಣ ಕರಡಿ, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಇನ್ನಿತರರು ಇದ್ದರು.
Next Story





