ಯಾದಗಿರಿ | ಮಹಿಳೆಯರ ಮೇಲೆ ಬಿಜೆಪಿಗೆ ಗೌರವವಿಲ್ಲ: ಡಾ.ಭೀಮಣ್ಣ ಮೇಟಿ

ಯಾದಗಿರಿ: ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ವಿರುದ್ಧ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಅವರು ಕೀಳುಮಟ್ಟದ ಹೇಳಿಕೆ ನೀಡಿರುವುದು ಮಹಿಳೆಯರ ಮೇಲೆ ಯಾವ ರೀತಿಯ ಗೌರವವಿದೆ ಎಂಬುದು ಬಿಜೆಪಿಯ ಸಂಸ್ಕೃತಿ ತೋರಿಸುತ್ತದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯ ಉಪಾಧ್ಯಕ್ಷ ಡಾ.ಭೀಮಣ್ಣ ಮೇಟಿ ಹೇಳಿದರು.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಮುಖ್ಯ ಕಾರ್ಯದರ್ಶಿಗಳು ರಾತ್ರಿಯಲ್ಲಿ ಸರಕಾರಕ್ಕೆ, ಇಡೀ ದಿನ ಮುಖ್ಯಮಂತ್ರಿಗಳಿಗಾಗಿ ಕೆಲಸ ಮಾಡುತ್ತಾರೆ ಎಂದು ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಹೇಳಿದ್ದಾರೆ. ಅವರ ಹೇಳಿಕೆಯನ್ನು ತೀವ್ರವಾಗಿ ಖಂಡನೀಯವಾಗಿದೆ ಎಂದು ತಿಳಿಸಿದರು.
ಬಿಜೆಪಿಯ ನಾಯಕರು ಮಹಿಳೆಯರ ಮೇಲೆ ಯಾವುದೇ ರೀತಿಯಿಂದ ಗೌರವ ಇಲ್ಲದಂತೆ ಮಾತನಾಡುತ್ತಾರೆ. ನಿಜಕ್ಕೂ ಇದು ಅತ್ಯಂತ ನಾಚಿಗೇಡು ಸಂಗತಿಯಾಗಿದೆ. ಹೇಳುವುದು ಒಂದು ಮಾತನಾಡುವುದು ಇನ್ನೊಂದು ಆಗಿದೆ. ಮಹಿಳೆಯರ ಏಳ್ಗೆಯನ್ನು ಅವರು ಎಂದಿಗೂ ಕೂಡ ಸಹಿಸುವುದಿಲ್ಲ ಎಂದು ತಿಳಿಸಿದರು.
ಹಗರುವಾಗಿ ಮಾತನಾಡುವುದು ನಿಜಕ್ಕೂ ಸಹ ಸಮಾಜಕ್ಕೆ ಒಳ್ಳೆಯದು ಅಲ್ಲವೇ ಅಲ್ಲ. ಇಂತಹ ಮನಸ್ಥಿತಿ ಹೊಂದಿರುವ ಬಿಜೆಪಿ ನಾಯಕರ ವಿರುದ್ಧ ಮುಂದಿನ ದಿನಗಳಲ್ಲಿ ಜನರೇ ಬೀದಿಗಿಳಿದು ಹೋರಾಟ ಮಾಡುವ ಸಾಧ್ಯತೆ ಹೆಚ್ಚಳವಾಗಿದೆ ಎಂದು ಹೇಳಿದರು.







