ಯಾದಗಿರಿ | ಬಸವಣ್ಣನವರ ಜಯಂತಿ ನಿಮಿತ್ತ ಕಾರು ರ‍್ಯಾಲಿ

ಯಾದಗಿರಿ : ಸಾಂಸ್ಕೃತಿಕ ನಾಯಕ ಹಾಗೂ ವಿಶ್ವಗುರು ಬಸವೇಶ್ವರ ಜಯಂತಿ ನಿಮಿತ್ತವಾಗಿ ಬುಧವಾರ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಯುವ ಘಟಕದಿಂದ ಕಾರು ರ‍್ಯಾಲಿ ಹಮ್ಮಿಕೊಳ್ಳಲಾಯಿತು.
ನಗರದ ಬಸವೇಶ್ವರ ಗಂಜ್ ಪ್ರದೇಶದಲ್ಲಿರುವ ಬಸವೇಶ್ವರ ನಾಮಫಲಕದ ಬಸವೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ನಂತರ ಸಮಾಜದ ಯುವ ಮುಖಂಡ ಮಹೇಶರೆಡ್ಡಿ ಮುದ್ನಾಳ ಅವರು ಕಾರು ರ‍್ಯಾಲಿಗೆ ಚಾಲನೆ ನೀಡಿದರು.
ಈ ವೇಳೆ ಎಲ್ಲಡೇ ಸಾಂಸ್ಕೃತಿಕ ನಾಯಕ ಬಸವೇಶ್ವರ ಅವರಿಗೆ ಜಯಘೋಷ ಮೊಳಗಿತು. ಬಸವೇಶ್ವರ ಗಂಜ್ ಪ್ರದೇಶದಿಂದ, ಗಾಂಧಿ ವೃತ್ತ, ಸುಭಾಷ್ ವೃತ್ತದ ಮಾರ್ಗವಾಗಿ ಯಾದಗಿರಿ ಜಿಲ್ಲಾಧಿಕಾರಿ ಕಚೇರಿವರಗೆ ಭವ್ಯ ಕಾರು ಮೆರವಣಿಗೆ ನಡೆಸಲಾಯಿತು.
ಈ ವೇಳೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಯುವ ಘಟಕದ ಅಧ್ಯಕ್ಷ ಸುರೇಶ್ ಜಾಕಾ, ಯುಡಾ ಅಧ್ಯಕ್ಷ ವಿನಾಯಕ ಪಾಟೀಲ, ನಾಗರತ್ನ ಕುಪ್ಪಿ, ರುದ್ರಗೌಡ ಪಾಟೀಲ, ಬಸವರಾಜ ಸೊನ್ನದ, ವೀಣಾ ಮೋದಿ, ಶಿವಪುತ್ರ ಪಾಟೀಲ, ಅಪ್ಪಣ್ಣ ಜೈನ್, ಶರಣಗೌಡ ಪಾಟೀಲ, ರಮೇಶ್ ದೊಡ್ಡಮನಿ, ಲಿಂಗಪ್ಪ ಹತ್ತಿಮನಿ, ಹಣಮಂತ ಇಟಗಿ, ಸುರೇಶ್ ಬಾಡದ್, ಸುಭಾಷ್ ದೇವದುರ್ಗ, ಶರಣು ಪಡಶೆಟ್ಟಿ, ಸುಗು ಚಾಮಾ, ಸುರೇಶ್ ರಾಯಚೂರು, ಭರತ್, ಸುನೀಲ್ ವಾರದ್, ಸಂಗಮೇಶ ಪಾಣಿ, ಸಚಿನ್ ಪಡಶೆಟ್ಟಿ, ವಿನೋದ್ ಪಡಶೆಟ್ಟಿ, ವಿಶ್ವ ಗಣಪುರ, ಪ್ರಭು, ನಾಗು ಸಜ್ಜನ್, ಅರವಿಂದ ಕೆಂಭಾವಿ, ಶಶಾಂಕ ಕೆಂಭಾವಿ, ಅನೀಲ್ ಪಾಟೀಲ, ನಾಗು ಲದ್ದಿ,ವಿಶ್ವ ಕಾಜಗಾರ್, ನವೀನ್ ಕುಮಾರ್, ನಾಗು ಮೈಲಾಪುರ, ಪವನ್ ಮೈಲಾಪುರ, ಮೌನೇಶ ಪಾಟೀಲ, ವಿರುಪಾಕ್ಷಿ ಸ್ವಾಮಿ, ವಿಶ್ವನಾಥ ಕಾಜಗಾರ್, ಸೂರ್ಯಕಾಂತ ಕರದಳ್ಳಿ, ಅನೀಲ ಪಸಾರ್ ಸೇರಿದಂತೆ ಅನೇಕರು ಇದ್ದರು.







