Yadgiri | 42 ಲಕ್ಷ ರೂ. ವೆಚ್ಚದ ಸಿಸಿ ರಸ್ತೆ, ಚರಂಡಿ ಕಾಮಗಾರಿಗೆ ಚಾಲನೆ

ಯಾದಗಿರಿ : ನಗರದ ವಾರ್ಡ್ ನಂ.25ರ ವಿಶ್ವಾರಾಧ್ಯರ ಕಾಲೋನಿಯಲ್ಲಿ 42 ಲಕ್ಷ ರೂ. ವೆಚ್ಚದ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ ಶನಿವಾರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಾಮಗಾರಿಯನ್ನು ಗುಣಮಟ್ಟದಿಂದ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ವಿಶ್ವಾರಾಧ್ಯರ ಕಾಲೋನಿಯ ನಿವಾಸಿಗಳ ಬಹುದಿನಗಳ ಬೇಡಿಕೆಯಾಗಿದ್ದ ರಸ್ತೆ ಮತ್ತು ಚರಂಡಿ ಕಾಮಗಾರಿಯನ್ನು ಕೆಆರ್‌ಐಡಿಎಲ್ ವತಿಯಿಂದ ಕೈಗೆತ್ತಿಕೊಳ್ಳಲಾಗಿದೆ. ಈ ಹಿಂದೆ ಬಡಾವಣೆಯಲ್ಲಿ ಕಚ್ಚಾ ರಸ್ತೆ ಮಾತ್ರ ಇದ್ದು, ಚರಂಡಿ ವ್ಯವಸ್ಥೆ ಇರಲಿಲ್ಲ. ಈಗ ಕೈಗೊಂಡಿರುವ ಕಾಮಗಾರಿಯನ್ನು ಗುಣಮಟ್ಟದಿಂದ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.
ನಗರದ ಎಲ್ಲ ವಾರ್ಡ್‌ಗಳಲ್ಲಿ ಹಂತ ಹಂತವಾಗಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗಳನ್ನು ಕೈಗೊಂಡು ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ ಹೇಳಿದರು.
ಈ ಸಂದರ್ಭದಲ್ಲಿ ಬಡಾವಣೆ ಶರಣು ಪಡಶೆಟ್ಟಿ, ಇಲಾಖೆ ಇಂಜಿನಿಯರ್ ಗಳಾದ ಬನ್ನಪ್ಪ ಕೊಮ್ಮಾರ, ಎಇಇ ಮೌನೇಶ ಬೆಳಗೇರಾ, ಮರೆಪ್ಪ ಕವಡಿ, ಬಳ್ಳಾರ, ಶಾಮಸನ್ ಮಾಳಿಕೇರಿ, ಶಿವರಾಜ ಬಾಗೂರು, ಬೀರಲಿಂಗಪೂಜಾರಿ, ಅಯ್ಯಣ್ಣ , ಬಸವರಾಜ ಸಾಹುಕಾರ, ಸೋಮಶೇಖರ ಪಾಟೀಲ್, ಶಿವಾನಂದ ಸ್ವಾಮಿ, ಮಹಿಪಾಲರೆಡ್ಡಿ ಕರಣಗಿ, ಸೂಗೂರೇಶ ಕೊಳ್ಳಿ, ಅಶೋಕ ಪಡಶೆಟ್ಟಿ ಸೇರಿದಂತೆಯೇ ಇತರರಿದ್ದರು.






