ಯಾದಗಿರಿ | ರಸಗೊಬ್ಬರ ಮಾರಾಟ ಮಳಿಗೆಗಳಿಗೆ ಜಿಲ್ಲಾಧಿಕಾರಿ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಂದ ದಿಢೀರ್ ಭೇಟಿ, ಪರಿಶೀಲನೆ

ಯಾದಗಿರಿ: ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ಜಂಟಿ ಕೃಷಿ ನಿರ್ದೇಶಕ ರತೇಂದ್ರನಾಥ ಸುಗೂರು ಅವರು ಜಿಲ್ಲೆಯ ಶಹಾಪುರ ನಗರದ ವಿವಿಧ ರಸಗೊಬ್ಬರ ಮಳಿಗೆಗಳಿಗೆ ದಿಢೀರ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಶಹಾಪುರ ನಗರದ ಶ್ರೀಮರಡ್ಡಿ ಮಲ್ಲಿಕಾರ್ಜುನ ಆಗ್ರೋ ಏಜನ್ಸಿ, ಶ್ರೀ ಸಂಗಮೇಶ್ವರ ಆಗ್ರೋ ಮತ್ತು ವಿಜಯ ಆಗ್ರೋ ಟ್ರೇಡರ್ಸ್ ಅವರ ಕೃಷಿ ಪರಿಕರ ಮಾರಾಟ ಮಳಿಗೆ ಮತ್ತು ಗೋದಾಮು ಗಳಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ರೈತರಿಗೆ ವಿತರಿಸಲಾಗುವ ಮತ್ತು ಡಿ.ಎ.ಪಿ ರಸಗೊಬ್ಬರ ಗಳ ಪರಿಕರ ಮಾರಾಟ ನನ್ನು ಪರೀಕ್ಷಿಸಿದರು.
ಎಂ.ಆರ್ ಪಿ ದರದಲ್ಲಿಯೇ ರಸಗೊಬ್ಬರ ವನ್ನು ಮಾರಾಟ ಮಾಡುವಂತೆ ತಿಳಿಸಿದ ಅವರು, ರೈತರಿಗೆ ಒತ್ತಾಯ ಮಾಡಿ ಯಾವುದೇ ರೀತಿಯ ಲಿಂಕ್‌ಗಳನ್ನು ಕೊಡಬಾರದು ಎಂದು ಸೂಚಿಸಿದರು.
ಯೂರಿಯಾ ಮತ್ತು ಡಿಎಪಿ ರಸಗೊಬ್ಬರಗಳನ್ನು ಮಾತ್ರ ಬಳಸದೇ, ಸಂಯುಕ್ತ ರಸಗೊಬ್ಬರಗಳು ಹಾಗೂ ನ್ಯಾನೋ ಯೂರಿಯಾ,ನ್ಯಾನೋ, ಡಿಎ.ಪಿ. ರಸಗೊಬ್ಬರಗಳನ್ನು ಕೂಡ ಬಳಸುವಂತೆ ರೈತರಿಗೆ ತಿಳಿಸಿದರು.
ಪರಿಕರ ಮಾರಾಟ ಮಳಿಗೆಗಳಲ್ಲಿರುವ ರಸಗೊಬ್ಬರ ದಾಸ್ತಾನು ವಿತರಣಾ ಪ್ರಕ್ರಿಯೆಯನ್ನು ಪರಿಶೀಲಿಸಿ, ಇಲಾಖೆಯ ಅಧಿಕಾರಿಗಳು ರೈತರಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಸಮರ್ಪಕವಾಗಿ ವಿತರಿಸಲು ಅವರು ಸೂಚಿಸಿದರು.







