ಯಾದಗಿರಿ | ಅಂಬೇಡ್ಕರ್ ವೃತ್ತಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲು ಡಿಎಸ್‌ಎಸ್ ಮನವಿ

ಸುರಪುರ: ತಾಲೂಕಿನ ಪೇಠ ಅಮ್ಮಾಪುರ, ಮಂಗಳೂರ ಸೇರಿದಂತೆ ಎಲ್ಲಾ ಗ್ರಾಮಗಳಲ್ಲಿರುವ ಡಾ.ಬಾಬಾ ಸಾಹೇಬ ಅಂಬೇಡ್ಕರ್ ವೃತ್ತಗಳಲ್ಲಿನ ನಾಮಫಲಕಗಳ ಬಳಿ ಸಿಸಿ ಕ್ಯಾಮರಾ ಅಳವಡಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಡಿ.ಜಿ.ಸಾಗರ ಬಣ) ವತಿಯಿಂದ ನಗರದ ತಾಲೂಕು ಪಂಚಾಯತ್ ಮುಂದೆ ಸಾಂಕೇತಿಕ ಪ್ರತಿಭಟನೆ ನಡೆಸಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಪೇಠ ಅಮ್ಮಾಪುರ ಗ್ರಾಮದಲ್ಲಿರುವ ಅಂಬೇಡ್ಕರ್ ನಾಮಫಲಕದ ಬಳಿಯಲ್ಲಿ ಯಾರೋ ಕಿಡಿಗೇಡಿಗಳು ಶೌಚ ಮಾಡಿದ್ದಾರೆ. ಅಂಬೇಡ್ಕರ್‌ನ ನಾಮಫಲಕದ ಸ್ಟಿಕರ್ ಹರಿದಿದ್ದಾರೆ. ಇಂತಹ ಅನಾಹುತ ಸಂಭವಿಸದಂತೆ ಕ್ರಮ ಕೈಗೊಳ್ಳಲು ಎಲ್ಲಾ ಅಂಬೇಡ್ಕರ್ ನಾಮಫಲಕಗಳ ಬಳಿ ಸಿಸಿ ಕ್ಯಾಮರಾ ಅಳವಡಿಸಬೇಕು ಮತ್ತು ಪೇಠ ಅಮ್ಮಾಪುರ ಗ್ರಾಮದಲ್ಲಿರುವ ಎಸ್.ಸಿ ವಾರ್ಡ್ ನಲ್ಲಿ ಚರಂಡಿ ಸ್ವಚ್ಛಗೊಳಿಸಬೇಕು ಮತ್ತು ಕುಡಿಯುವ ನೀರಿನ ಸಮಸ್ಯೆ ಪರಿಹರಿಸಬೇಕು ಎಂದು ಒತ್ತಾಯಿಸಿದರು.
ನಂತರ ತಾಲೂಕು ಪಂಚಾಯತ್ ಇಓ ಬಸವರಾಜ ಸಜ್ಜನ್ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘದ ಉಪ ವಿಭಾಗೀಯ ಸಂಚಾಲಕ ರಮೇಶ ಬಡಿಗೇರ, ತಾಲೂಕು ಸಂಚಾಲಕ ತಿಪ್ಪಣ್ಣ ಶೆಳ್ಳಗಿ, ಎಂ.ಪಟೇಲ್, ವೆಂಕಟೇಶ ದೇವಾಪುರ, ಚನ್ನಬಸಪ್ಪ ದೇವಾಪುರ, ಶೇಖರ ಮಂಗಳೂರ, ರಾಜು ಬಡಿಗೇರ ಅಮ್ಮಾಪುರ, ಸಿದ್ದಪ್ಪ ಝಂಡದಕೇರಾ, ಹಸನಪ್ಪ ದೇವಾಪುರ, ಮಲ್ಲಪ್ಪ ದೇವಾಪುರ ಸೇರಿದಂತೆ ಅನೇಕರು ಭಾಗವಹಿಸಿದ್ದರು.





