ಯಾದಗಿರಿ | ಎಲ್ಲರ ಸಹಕಾರವಿದ್ದಲ್ಲಿ ಮಾತ್ರ ಬಾಲ್ಯ ವಿವಾಹ ನಿರ್ಮೂಲನೆ ಸಾಧ್ಯ : ವೀರನಗೌಡ

ಯಾದಗಿರಿ : ಬಾಲ್ಯ ವಿವಾಹ ಒಂದು ಅನಿಷ್ಟ ಪದ್ದತಿಯಾಗಿದ್ದು, ಇದನ್ನು ಸಂಪೂರ್ಣವಾಗಿ ತೋಲಗಿಸಬೇಕಾಗಿದೆ. ಬಾಲ್ಯ ವಿವಾಹ ನಿಷೇಧ ಹಾಗೂ ಪೋಕ್ಸೋ ಕಾಯ್ದೆಗಳಲ್ಲಿ ತುಂಬಾ ಕಠಿಣ ಶಿಕ್ಷೆಗಳಿವೆ. ಎಲ್ಲರ ಸಹಕಾರವಿದ್ದಲ್ಲಿ ಮಾತ್ರ ಬಾಲ್ಯ ವಿವಾಹ ಮತ್ತು ಬಾಲ ಗರ್ಭಿಣಿ ನಿರ್ಮೂಲನೆ ಮಾಡಲು ಸಾಧ್ಯ ಎಂದು ಯಾದಗಿರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ವೀರನಗೌಡ ಹೇಳಿದರು.
ಯಾದಗಿರಿ ನಗರದ ಪದವಿಪೂರ್ವ ಬಾಲಕಿಯರ ಕಾಲೇಜಿನಲ್ಲಿ ಯಾದಗಿರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಂಯುಕ್ತಾಶ್ರಯದಲ್ಲಿ ಮಿಷನ್ ಶಕ್ತಿ ಯೋಜನೆಯಡಿಯಲ್ಲಿ “ಕಾಲೇಜು ವಿದ್ಯಾರ್ಥಿನಿಯರಿಗೆ” ಬಾಲ್ಯ ವಿವಾಹ ನಿಷೇಧ, ಪೋಕ್ಸೋ ಕಾಯ್ದೆ-2012, ಮಕ್ಕಳು ಮತ್ತು ಮಹಿಳೆಯರ ಸಹಾಯವಾಣಿ ಗಳಾದ-1098, 112, 181 ಹಾಗೂ ಮಹಿಳೆಯರ ಸುರಕ್ಷಿತ, ಭದ್ರತೆ ಮತ್ತು ಸಬಲೀಕರಣ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯಾದಗಿರಿ ಸರ್ಕಾರಿ ಪದವಿ ಪೂರ್ವ ಬಾಲಕಿಯರ ಮಹಾವಿದ್ಯಾಲಯ ಉಪನ್ಯಾಸಕಿ ನಿರ್ಮಲಾ, ಯಾದಗಿರಿ ಜಿಲ್ಲಾ ಮಿಷನ್ ಸಂಯೋಜಕರು ಶ್ರೀ ಯಲ್ಲಪ್ಪ.ಕೆ., ಯಾದಗಿರಿ ಸರ್ಕಾರಿ ಪದವಿ ಪೂರ್ವ ಬಾಲಕಿಯರ ಮಹಾವಿದ್ಯಾಲಯ ಪ್ರಾಂಶುಪಾಲರಾದ ಬಿಸಲಪ್ಪ ಕಟ್ಟಿಮನಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಯಾದಗಿರಿ ಜೆಂಡರ್ ಸ್ಪೆಷಲೀಸ್ಟ್, ಜಿಲ್ಲಾ ಮಹಿಳಾ ಸಬಲೀಕರಣ ಘಟಕದ ಬಸಲಿಂಗಮ್ಮ ಕಾರ್ಯಕ್ರಮದ ನಿರೂಪಿಸಿದರು. ಮಹಾದೇವಪ್ಪ ನೆರವೇರಿಸಿದರು.





