ಯಾದಗಿರಿ | ನಕಲಿ ಜಾತಿ ಪ್ರಮಾಣ ಪತ್ರಗಳನ್ನು ತಡೆಯಲು ಸರಕಾರದ ವಿರುದ್ದ ಹೋರಾಟ : ಮಗ್ದಂಪುರ

ಯಾದಗಿರಿ: ವಿಧಾನ ಸಭೆ ಅಧಿವೇಶನ ಪ್ರಾರಂಭವಾಗುತ್ತಿದ್ದು, ಆ ಅಧಿವೇಶನದಲ್ಲಿ ನಕಲಿ ಜಾತಿ ಪ್ರಮಾಣ ಪತ್ರಗಳನ್ನು ತೆಗೆದುಕೊಂಡವರ ವಿರುದ್ದ ಕಾನೂನು ಕ್ರಮ ಆಗಬೇಕು ಹಾಗೂ ಇದಕ್ಕೆ ಪರಿಶಿಷ್ಟ ಪಂಗಡ ಮೀಸಲಾತಿಯಿಂದ ಆಯ್ಕೆಯಾದ ಶಾಸಕರು ಅಧಿವೇಶನದಲ್ಲಿ ದ್ವನಿ ಎತ್ತಬೇಕು ಎಂದು ಉತ್ತರ ಕರ್ನಾಟಕ ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷರಾದ ಮಾರೆಪ್ಪ ನಾಯಕ ಮಗ್ದಂಪುರ ಹೇಳಿದರು.
ನಗರದ ಜಿಲ್ಲಾ ವಾಲ್ಮೀಕಿ ಭವನದಲ್ಲಿ ಜಿಲ್ಲಾ ಮಟ್ಟದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ವಾಲ್ಮೀಕಿ ಸಮಾಜದ ವಿವಿಧ ಬೇಡಿಕೆಗಳಾದ ಯಾದಗಿರಿ ನಗರದ ಸರಕಾರಿ ಪದವಿ ಮಹಾವಿದ್ಯಾಲಯ ಹತ್ತಿರ ಮಹರ್ಷಿ ವಾಲ್ಮೀಕಿ ಪುತ್ಥಳಿ ನಿರ್ಮಾಣ ಸ್ಥಳಕ್ಕೆ ಸಂಬಂಧಿಸಿದ ದಾಖಲಾತಿ ಇದ್ದರೂ, ಕೂಡ ಎ ಖಾತಾ ಕೊಡಲು ಸಂಬಂಧಿಸಿದ ನಗರ ಸಭೆ ಅಧಿಕಾರಿಗಳು ನೀಡದೆ ಇರುವುದು ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗೆ ಸಚಿವರನ್ನು ನೇಮಿಸದೆ ನಮ್ಮ ಸಮಾಜಕ್ಕೆ ಬರುವ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಹಾಕಿ ತುಳಿತಕ್ಕೆ ಓಳಗಾದ ಸಮಾಜವನ್ನು ಮೂಲೆ ಗುಂಪು ಮಾಡುತ್ತಿದೆ ಎಂದು ಆರೋಪಿಸಿದರು.
ವಾಲ್ಮೀಕಿ ನಾಯಕ ಸಮಾಜದ ಜಿಲ್ಲಾ ಅಧ್ಯಕ್ಷ ಗೌಡಪ್ಪ ಗೌಡ ಆಲ್ದಾಳ ಮಾತನಾಡಿದರು.
ಈ ಸಂದರ್ಭದಲ್ಲಿ ವಾಲ್ಮೀಕಿ ನಾಯಕ ಸಮಾಜದ ಜಿಲ್ಲಾ ಮುಖಂಡರಾದ ಸಿದ್ದಲಿಂಗಪ್ಪ ನಾಯಕ, ಚಂದ್ರಕಾಂತ ಹತ್ತಿಕುಣಿ, ಶರಣಪ್ಪ ಜಾಕನಹಳ್ಳಿ, ಗಂಗಾಧರ ನಾಯಕ, ದೊಡ್ಡಯ್ಯ ನಾಯಕ, ಅಂಬು ನಾಯಕ, ವಾಲ್ಮೀಕಿ ನಾಯಕ ಸಮಾಜದ ತಾಲೂಕ ಅಧ್ಯಕ್ಷರಾದ ಸಾಹೇಬ ಗೌಡ ನಾಯಕ ಗೌಡಗೇರ, ಶಹಪೂರ ತಾಲೂಕ ವಾಲ್ಮೀಕಿ ಸಮಾಜದ ಅಧ್ಯಕ್ಷರಾದ ಮರೆಪ್ಪ ಪ್ಯಾಟಿ, ಸುರಪುರ ತಾಲೂಕು ವಾಲ್ಮೀಕಿ ಸಮಾಜದ ಅಧ್ಯಕ್ಷ ಭೀಮನಗೌಡ, ಗುರಮಿಠಕಲ್ ತಾಲೂಕು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಕಾಶಪ್ಪ ನಾಯಕ, ಶೇಖರ ದೊರೆ, ಮಲ್ಲಿಕಾರ್ಜುನ ಕಟಕಟಿ, ಮಲ್ಲಿಕಾರ್ಜುನ ನಿಲಹಳ್ಳಿ, ಮೋನಪ್ಪ ಹಳಿಗೇರ, ಬಸವರಾಜ ಗೊಂದೆನೂರ, ನಾಗರಾಜ ಪ್ಯಾಪ್ಲಿ, ಚಂದಪ್ಪ ರಾಮಸಮುದ್ರ, ಬಸವರಾಜ ಹತ್ತಿಕುಣಿ, ಭೀಮರಾಯ ರಾಮಸಮುದ್ರ, ಸಿದ್ದಪ್ಪ ಕ್ಯಾಸಪನಳ್ಳಿ, ಲಕ್ಷ್ಮಣ ಜೀನಕೇರಿ, ಸಾಬು ನಿಲಹಳ್ಳಿ, ಪೋಲಪ್ಪ ನಿಲಹಳ್ಳಿ, ಈಶಪ್ಪ ಹೆಡಗಿಮದ್ರಿ, ರವಿ ಜಮಾದಾರ, ಕಾಶಿನಾಥ ನಾನೆಕ್, ಮಲ್ಲೇಶ ನಾಯಕ, ಮೋನಪ್ಪ ಯಾದಗಿರಿ, ಶಿವರಾಜ ಹವಲ್ದಾರ, ಬಂದಪ್ಪ ನಾಯಕ, ರವಿ ಹೊಸ್ಸಳ್ಳಿ, ರಮೇಶ ಯಾದಗಿರಿ, ಶ್ರೀನಿವಾಸ ಯಕ್ಷಂತಿ, ದೊಡ್ಡಪ್ಪ ನಾಯಕ, ರವಿಕುಮಾರ, ಅಂಬಣ್ಣ ಗೌಡಗೇರ, ಮಂಜುನಾಥ ಬಳಿಚಕ್ರ, ವಾಲ್ಮೀಕಿ ನಾಯಕ ಸಮಾಜದ ಪದಾಧಿಕಾರಿಗಳು ಇದ್ದರು.







