ಯಾದಗಿರಿ | ಸರ್ಕಾರಿ ಪದವಿ ಕಾಲೇಜಿನ ಕೋಣೆಗಳ ನೆಲಹಾಸಿಗೆ ಕುಸಿತ : ಕೂಡಲೇ ಸರಿಪಡಿಸಲು ಶಾಸಕ ಪಾಟೀಲ್ ಸೂಚನೆ

ಯಾದಗಿರಿ : ಇಲ್ಲಿನ ಸರ್ಕಾರಿ ಪದವಿ ಮಹಾವಿದ್ಯಾಲಯದ ಆವರಣದಲ್ಲಿ ಇತ್ತೀಚಿಗೆ ನಿರ್ಮಾಣಗೊಂಡ ತರಗತಿ ಕೋಣೆಗಳ ನೆಲಮಹಡಿಯ ನೆಲಹಾಸಿಗೆ ಕುಸಿದ ಬಗ್ಗೆ ಸೋಮವಾರ ಪರಿಶೀಲನೆ ನಡೆಸಿದ ಶಾಸಕ ಚೆನ್ನಾರಡ್ಡಿ ಪಾಟೀಲ್ ತುನ್ನೂರು, ಕಳೆಪೆ ಕಾಮಗಾರಿಗೆ ಕಾರಣರಾದ ಕೆಆರ್ ಡಿಎಲ್ ಇಲಾಖೆ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿ ಕೂಡಲೇ ಕಾಮಗಾರಿ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವಂತೆ ಸೂಚನೆ ನೀಡಿದರು.
ಕಾಲೇಜಿನ ಪ್ರಾಚಾರ್ಯ ಡಾ.ಸುಭಾಷಚಂದ್ರ ಕೌಲಗಿ ಅವರ ಜೊತೆ ಕೊಣೆಗಳಿಗೆ ತೆರಳಿ ಶಾಸಕರು ಗಮನಿಸಿದದರು. ಕಾಲೇಜಿನ ಏನೇ ಸಮಸ್ಯೆ ಇದ್ದರೇ ತಮ್ಮ ಗಮನಕ್ಕೆ ತರುವಂತೆಯೇ ಪ್ರಾಚಾರ್ಯ ಡಾ.ಕೌಲಗಿ ಅವರಿಗೆ ಸೂಚಿಸಿದರು.
Next Story





