ಯಾದಗಿರಿ | ಹಿರಿಯರ ಪುಣ್ಯಸ್ಮರಣೆ ಪ್ರಯುಕ್ತ 109 ಜನರಿಗೆ ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸೆ

ಯಾದಗಿರಿ: ಹೆತ್ತವರನ್ನೂ ಕಣ್ಣೆತ್ತಿ ಸಹ ನೋಡದ ಒಂದು ವರ್ಗವಿರುವ ಈ ಕಾಲದಲ್ಲಿ ತಮ್ಮ ತಂದೆ, ತಾಯಿ ಸವಿನೆನಪಿಗಾಗಿ ಸುಮಾರು 109 ಜನರಿಗೆ ಖಾಸಗಿ ಆಸ್ಪತ್ರೆಯಲ್ಲಿ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿಸಿ ಇಂದಿನ ಪುಣ್ಯಸ್ಮರಣೆ ದಿನದಂದು ಅವರೆಲ್ಲರಿಗೂ ಉಚಿತ ಕನ್ನಡಕ ವಿತರಿಸಿದ ಯಲ್ಹೆರಿ ಶಿವರಾಯ ಕುಟುಂಬ ಹಾಗೂ ಮುದ್ನಾಳ್ ಕುಟುಂಬದ ಈ ಸಾಮಾಜಿಕ ಕಾರ್ಯ ಸಮಾಜಕ್ಕೆ ಮಾದರಿಯಾಗಿದೆ ಎಂದು ಹೆಡಗಿಮದ್ರಾದ ಶಾಂತಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಬಣ್ಣಿಸಿದರು.
ತಾಲೂಕಿನ ಮುದ್ನಾಳ್ ದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬುಧವಾರ ಲಿಂ.ಸೋಮನಾಥರಡ್ಡಿಗೌಡ ಶಿವರಾಯ ಯಲ್ಹೇರಿ, ಲಿಂ.ಶಂಕರಲಿಂಮ್ಮ ಶಿವರಾಯ ಯಲ್ಹೇರಿ, ಲಿಂ.ಮಾಜಿ ಶಾಸಕ ಡಾ.ವೀರಬಸವಂತರಡ್ಡಿ ಮುದ್ನಾಳ ಮತ್ತು ಲಿಂ.ಮಾಜಿ ಶಾಸಕ ವೆಂಕಟರೆಡ್ಡಿ ಮುದ್ನಾಳ ಅವರ ಸ್ಮರಣಾರ್ಥ ಹಮ್ಮಿಕೊಂಡಿದ್ದ ಉಚಿತ ಕಣ್ಣಿನ ತಪಾಸಣಾ, ಕಣ್ಣಿನ ಶಸ್ತ್ರ ಚಿಕಿತ್ಸೆ ಮತ್ತು ಕನ್ನಡಕ ವಿತರಣಾ ಶಿಬಿರದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ರಾಜ್ಯ ಬಿಜೆಪಿ ಮಾಜಿ ಉಪಾಧ್ಯಕ್ಷರಾದ ನಾಗರತ್ನ ಕುಪ್ಪಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಪ್ರಥಮ ದರ್ಜೆ ಗುತ್ತಿಗೆದಾರ ಹಣಮಂತರಡ್ಡಿಗೌಡ ಮುದ್ನಾಳ, ಚನ್ನಬಸವರಡ್ಡಿ ಮುದ್ನಾಳ, ರಮೇಶ್ ಬಾಬು ಮುದ್ನಾಳ, ಶರಣುಗೌಡ ಮುದ್ನಾಳ, ಮುದ್ನಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸುದಾ ಅರಳಿ,ಡಾ.ಜಯಲಕ್ಷ್ಮಿ ಆರ್ ಮುದ್ನಾಳ, ಡಾ.ವಿವೇಕಾನಂದರಡ್ಡಿ ಯಲ್ಹೇರಿ, ಶರಣಗೌಡ ಯಲ್ಹೇರಿ, ರಾಮಣ್ಣಗೌಡ ಮುದ್ನಾಳ, ಡಾ.ಸುರೇಖ ಪಾಟೀಲ್, ಡಾ.ರಮೇಶ, ಟಿಎಚ್ಓ ಡಾ.ಹಣಮಂತರಡ್ಡಿ, ಮಮತಾ ರಡ್ಡಿ, ಮಂಜುಳಾ ರಡ್ಡಿ, ಆಸ್ಪತ್ರೆ ಸಿಬ್ಬಂದಿ ನವೀನ್ ಗೌಡ ಪಾಟೀಲ್ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರ, ಮುದ್ನಾಳ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.







