ಯಾದಗಿರಿ | ಬೆಳಗೆರಾ ಗ್ರಾಮದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿಯ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ಶಿಬಿರ

ಯಾದಗಿರಿ : ಯಾದಗಿರಿ ಜಿಲ್ಲೆಯ ಮುಂಡರಗಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಳಗೆರಾ ಗ್ರಾಮದ "ಕಾಮನಾಯಕ್ಕ ಕೆರೆ"ಯಲ್ಲಿ ಹೂಳೆತ್ತುವ, ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಕಾತ್ರಿಯ ಕಾರ್ಮಿಕರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆ, ಜಿಲ್ಲಾ ಪಂಚಾಯತ್ ಯಾದಗಿರಿ, ತಾಲೂಕು ಪಂಚಾಯತ್ ಯಾದಗಿರಿ, ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಸಂಜಿವಿನಿ - ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆ, PRI-CBO ಸಮುದಾಯ ಆಧಾರಿತ ಒಗ್ಗೂಡಿಸುವಿಕೆ ಹಾಗೂ ವಿವಿಧ ಇಲಾಖೆಯ ವತಿಯಿಂದ ಆರೋಗ್ಯ ತಪಾಸಣೆ ನಡೆಸಲಾಯಿತು.
ಗ್ರಾಮ ಪಂಚಾಯತ್ ಸದಸ್ಯ ಮೌನೇಶ್ ಬೆಳಗೆರೆ, ಮುಂಡರಗಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ರೇಣುಕಾ ಮಾತನಾಡಿದರು.
ಈ ಸಂದರ್ಭದಲ್ಲಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ಜಿಲ್ಲಾ ಉಪಾಧ್ಯಕ್ಷರು ಮಲ್ಲು ದೊಡ್ಮನಿ ಬೆಳಗೆರ, ಸಾಹಸ ಸಂಸ್ಥೆಯ ಮೇಲ್ವಿಚಾರಕರಾದ ಆನಂದ್ ಕುಮಾರ್, ಸುರೇಖಾ, ಅಲಿಖಾನ್, ಶರಣಮ್ಮ, PHCO ಶ್ರೀಮತಿ ನಾಗವೇಣಿ, ಉಸ್ಮಾನ್, ಮಂಜುಳಾ, ಬಸಲಿಂಗಮ್ಮ, ವೆಂಕಟೇಶ್ ಯಾದವ್, ಮೌನೇಶ್, ಬಸ್ಸಮ್ಮ, ರಾಜು ಪವಾರ್, ಆಶೆ ಕಾರ್ಯಕರ್ತರು, ಸೇರಿದಂತೆ ಉದ್ಯೋಗಿ ಖಾತ್ರೇಯ ಕಾರ್ಮಿಕರು, ಗ್ರಾಮದ ಹಿರಿಯರು ಗ್ರಾಮಸ್ಥರು ಉಪಸ್ಥಿತರಿದ್ದರು.







