ಯಾದಗಿರಿ | ಜಿಲ್ಲಾ ಪತ್ರಿಕಾ ಭವನದಲ್ಲಿ ಸ್ವಾತಂತ್ರ್ಯ ದಿನಾಚರಣೆ

ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನವನ್ನು ಮುಂದಿನ ತಲೆಮಾರಿಗೆ ತಿಳಿಸುವುದು ಅಗತ್ಯ; ಸಂಕೀನ್
ಯಾದಗಿರಿ: ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ , ಪರಿಶ್ರಮವನ್ನು ನಾವು ಸ್ಮರಿಸಿ ಅದನ್ನು ಮುಂದಿನ ತಲೆ ಮಾರಿಗೆ ತಿಳಿಸುವ ಪ್ರಯತ್ನ ಮಾಡಬೇಕು ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್ ಹೇಳಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಜಿಲ್ಲಾ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಸ್ವಾತಂತ್ರ್ಯ ದಿನಾಚರಣೆ ಕೇವಲ ಆಚರಣೆಗೆ ಸೀಮಿತವಾಗುತ್ತಿದೆ. ಬದಲಿಗೆ ಇತಿಹಾಸವನ್ನು ಪುನರ್ ಮನನ ಮಾಡುವಂತಾಗಬೇಕು. ಮುಂದಿನ ಪೀಳಿಗೆಗೆ ನಮ್ಮ ಸ್ವಾತಂತ್ರ್ಯ ಹೋರಾಟದ ಇತಿಹಾಸ ತಿಳಿಸುವಂತಾಗಬೇಕು ಎಂದರು.
ಈ ವೇಳೆ ಸೂಗಪ್ಪ ಮಾಲಿಪಾಟೀಲ್, ಡಾ.ಎಸ್.ಎಸ್. ನಾಯಕ, ಮಲ್ಲು ನಗನೂರು, ಮಲ್ಲಿಕಾರ್ಜುನ ಆಶನಾಳ, ದೇವರಾಜ ನಾಯಕ, ಬೀರಲಿಂಗಪ್ಪ, ಸಾಜೀದ್ ಹಯ್ಯಾತ್, ಸುದೀರ್ ಕೋಟೆ, ರಾಜೇಂದ್ರಕುಮಾರ ಇದ್ದರು.
Next Story





