ಯಾದಗಿರಿ | ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸೀಟು ಹಂಚಿಕೆ ಮಂಥನ ಕಾರ್ಯಕ್ರಮ
ಸೀಟು ಹಂಚಿಕೆ ವಂಚಕರಿಂದ ತಪ್ಪಿಸಿಕೊಳ್ಳಲು ಮಂಥನ ಸಹಕಾರಿ : ರಾಮನಗೌಡ

ಸುರಪುರ: ಪಿಯುಸಿ ವಿಜ್ಞಾನ ವಿಭಾಗದಿಂದ ಪಾಸಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನೀಟ್ ಹಾಗೂ ಸಿಇಟಿ ಪರೀಕ್ಷೆ ಬರೆದವರು ಯುಜಿಸಿಇಟಿ 2025ರ ಸೀಟು ಹಂಚಿಕೆ ಕುರಿತಾಗಿ ಮಾಹಿತಿ ಪಡೆಯಲು ಹಾಗೂ ಸೀಟು ಹಂಚಿಕೆ ಕುರಿತು ವಂಚಕರಿಂದ ತಪ್ಪಿಸಿಕೊಳ್ಳಲು ಸೀಟು ಹಂಚಿಕೆ ಮಂಥನ ಕಾರ್ಯಕ್ರಮ ಸಹಕಾರಿಯಾಗಲಿದೆ ಎಂದು ನಗರದ ಸರಕಾರಿ ಪಾಲಿಟೆಕ್ನಿಕ್ ಕಾಲೇಜ್‌ನ ಪ್ರಭಾರೆ ಪ್ರಾಂಶುಪಾಲ ರಾಮನಗೌಡ ಪಾಟೀಲ್ ತಿಳಿಸಿದರು.
ನಗರದ ಸರಕಾರಿ ಪಾಲಿಟೆಕ್ನಿಕ್ ಕಾಲೇಜ್‌ನಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬೆಂಗಳೂರು ವತಿಯಿಂದ ಯುಜಿಸಿಇಟಿ-2025ರ ಸೀಟು ಹಂಚಿಕೆ ಮಂಥನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪರೀಕ್ಷಾ ಪ್ರಾಧಿಕಾರ ಬೆಂಗಳೂರವರ ಮುಖಾಂತರ ಆನ್ ಲೈನ್ ಎಂಟ್ರಿ ಆಪ್ಸಿನ್ ಮೂಲಕ ಒದಗಿಸಿರುವ ಸರಕಾರಿ, ಅನುದಾನಿತ, ಖಾಸಗಿ ಇಂಜಿನೀಯರಿಂಗ್ ಸಂಸ್ಥೆ ಮತ್ತು ಮೆಡಿಕಲ್, ನರ್ಸಿಂಗ್, ಅಗ್ರಿಕಲ್ಚರಲ್, ವೆರ‍್ನರಿ ಇನ್ನಿತರೆ ಕೋರ್ಸ್ಗಳಿಗೆ ವಿದ್ಯಾರ್ಥಿಗಳು ಗಳಿಸಿರುವ ರ‍್ಯಾಂಕ್ ಸಂಖ್ಯೆಯನ್ನು ಆಧರಿಸಿ ಐಚ್ಛಿಕ್ ಕೋರ್ಸ್ನ್ನು ನೇರವಾಗಿ ಆಯ್ಕೆ ಮಾಡಿಕೊಳ್ಳುವ ಕುರಿತಾದ ಮಾರ್ಗದರ್ಶನ ಇದಾಗಿದೆ ಹಾಗೂ ಈ ಕಾರ್ಯಕ್ರಮದಿಂದ ಆನ್ಲೈನ್ ಮತ್ತು ವಂಚಕರಿಂದ ಆಗುವ ಅನ್ಯಾಯದ ಕುರಿತು ಎಚ್ಚರಿಸುವ ಕಾರ್ಯಕ್ರಮ ಇದಾಗಿದೆ ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಂಪ್ಯೂಟರ್ ಪ್ರೋಗ್ರಾಮರ್ ಜಗನ್ನಾಥ್ ಮುದ್ನೂರ್ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಡಾ.ಸಿದ್ಧರಾಮ ಪಾಟೀಲ, ಡಾ.ಸಿದ್ರಾಮ, ಶೃತಿ ಚಾಮಾ,ಶಾಮಲ ಯಾದವ್ ಹಾಗೂ ಕಚೇರಿ ಸಿಬ್ಬಂದಿಗಳಾದ ನರಾಯಣರಾವ್ ಹೆಚ್., ರೇಖಾ ಹೋಟಕರ್, ನಾಗಮ್ಮ ಹಿರೇಮಠ, ಸುನೀಲಕುಮಾರ, ಅಯ್ಯಣ್ಣ,ದಾವಲಸಾಬ್ ಅತಿಥಿ ಉಪನ್ಯಾಸಕರಾದ ಶ್ರೀನಿವಾಸ ನಾಯಕ, ಮಹೇಶ, ದೇವಿಂದ್ರಪ್ಪ, ಖಾಲಿದ್ ಅಹ್ಮದ್, ಕರಿಷ್ಮಾ ಕಪೂರ್ ಹಾಗೂ ಕಾಲೇಜ್‌ನ ಎಲ್ಲಾ ಸಿಬ್ಬಂದಿಗಳು ಭಾಗವಹಿಸಿದ್ದರು.
ಜಿಲ್ಲೆಯ ಎಲ್ಲಾ 6 ತಾಲೂಕು ಸೇರಿದಂತೆ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಗುಡಗುಂಟಿ ಸೇರಿ ಒಟ್ಟು 450ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗವಹಿಸಿದ್ದರು.







