ಯಾದಗಿರಿ | ಕರ್ನಾಟಕ ದ್ವಿಚಕ್ರ ವಾಹನ ಕಾರ್ಯಗಾರ ಮಾಲಕರ ಸಂಘ ಉದ್ಘಾಟನೆ

ಸುರಪುರ: ಕರ್ನಾಟಕ ದ್ವಿಚಕ್ರವಾಹನ ಕಾರ್ಯಗಾರ ಮಾಲಕರ ಮತ್ತು ತಂತ್ರಜ್ಞಾನ ಸಂಘದ ತಾಲೂಕು ಘಟಕದ ಉದ್ಘಾಟನೆ ಹಾಗೂ ನೂತನ ಪದಾಧಿಕಾರಿಗಳ ನೇಮಕ ಕಾರ್ಯಕ್ರಮ ನಡೆಸಲಾಯಿತು.
ಉದ್ಘಾಟನೆಯನ್ನು ಜ್ಯೋತಿ ಬೆಳಗುವ ಮೂಲಕ ಸಂಘದ ರಾಜ್ಯ ಅಧ್ಯಕ್ಷ ಪ್ರಸನ್ನಕುಮಾರ್ ಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ರಾಜಾ ಕುಮಾರ್ ನಾಯಕ ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರು ಯಾದಗಿರಿ, ಕಮಲಾಕರ ದನ್ನಿ ಸಂಘದ ಕಲಬುರ್ಗಿ ಜಿಲ್ಲಾಧ್ಯಕ್ಷರು, ಮಲ್ಲೇಶ ಗುತ್ತೇದಾರ ತಾಲೂಕು ಅಧ್ಯಕ್ಷ ಶಹಾಪೂರ, ಗಾಳೆಪ್ಪ ಹಾದಿಮನಿ ಮುಖಂಡರು ದೀವಳಗುಡ್ಡ, ಶಿವರಾಜ ವಗ್ಗರ್ ತಾಲೂಕು ಕಾರ್ಯಧ್ಯಕ್ಷ ಜಯ ಕರ್ನಾಟಕ ರಕ್ಷಣಾ ಸೇನೆ ಸುರಪುರ, ಮಲ್ಲಿಕಾರ್ಜುನ ಟೊಣಪೆ ಸಂಘದ ಶಹಾಪುರ ತಾಲೂಕು ಕಾರ್ಯದರ್ಶಿ ಹಾಗೂ ಇನ್ನು ಅನೇಕ ಮುಖಂಡರು ಭಾಗವಹಿಸಿದ್ದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಅಬ್ದುಲ್ ಜಿಲಾನಿ ವಹಿಸಿದ್ದರು.ಎಮ್.ಡಿ ಖಾಜಾಸಾಬ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ನೂತನ ಸುರಪುರ ತಾಲೂಕು ಪದಾಧಿಕಾರಿಗಳು:
ಅಧ್ಯಕ್ಷರಾಗಿ ಅಬ್ದುಲ್ ಜಿಲಾನಿ, ಉಪಾಧ್ಯಕ್ಷರಾಗಿ ಪ್ರವೀಣ ವಿಭೂತೆ, ಕಾರ್ಯದರ್ಶಿರಾಗಿ ಇಮ್ರಾನ್ ಉಸ್ತಾದ, ಸಹ ಕಾರ್ಯದರ್ಶಿರಾಗಿ ಸುರೇಶ್ ಸುರಪುರ, ಖಜಾಂಚಿಯಾಗಿ ಎಂ.ಡಿ. ಅಝುರುದ್ದಿನ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಇಮ್ರಾನ್ ಬೇಗ್, ಕೃಷ್ಣ ಸುರಪುರ, ಉಮಾಕಾಂತ ಟೊಣಪೆ, ಸಲೀಂ ಸುರಪುರ, ಮಹಮ್ಮದ ಶಹಬಾಜ್, ಮಹಮ್ಮದ ಮುಸ್ತಫಾ, ಸಂತೋಷ್ ಟೊಣಪೆ ಅವರನ್ನು ನೇಮಕ ಮಾಡಲಾಯಿತು.





