ಯಾದಗಿರಿ | ಸರಕಾರದ ಯೋಜನೆಗಳನ್ನು ಸದುಪಯೋಗ ಮಾಡಿಕೊಳ್ಳಿ : ಶಾಸಕ ಆರ್.ವಿ.ನಾಯಕ

ಸುರಪುರ: ನಮ್ಮ ಸರಕಾರ ರಾಜ್ಯದ ಜನರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದು, ಸಾರ್ವಜನಿಕರು ಇವುಗಳ ಸದುಪಯೋಗ ಮಾಡಿಕೊಳ್ಳುವಂತೆ ಶಾಸಕ ರಾಜಾ ವೇಣುಗೋಪಾಲ ನಾಯಕ ತಿಳಿಸಿದರು.
ನಗರದ ವಸಂತ ಮಹಲ್ ಆವರಣದಲ್ಲಿ 19 ಜನ ವಿಶೇಷ ಚೇತನರಿಗೆ ತ್ರಿಚಕ್ರ ವಾಹನಗಳ ವಿತರಣೆ ಮಾಡಿ ಮಾತನಾಡಿದ ಅವರು, ರಾಜ್ಯದಲ್ಲಿರುವ ವಿಶೇಷ ಚೇತನರಿಗೂ ಅನೇಕ ಯೋಜನೆಗಳಿವೆ. ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್, ಪುರಸಭೆ, ನಗರಸಭೆಗಳಲ್ಲೂ ಒಳ್ಳೆಯ ಯೋಜನೆಗಳಿದ್ದು ಅವುಗಳ ಸದುಪಯೋಗ ಪಡೆದುಕೊಳ್ಳಬೇಕು ಹಾಗೂ ಇಂದು ತ್ರಿಚಕ್ರ ವಾಹನಗಳನ್ನು ಪಡೆದುಕೊಂಡವರು ಇವುಗಳಿಂದ ಜೀವನೋಪಾಯಕ್ಕೆ ಉಪಯೋಗಿಸಿಕೊಳ್ಳುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಹೀನಾಕೌಸರ್ ಶಕೀಲ್ ಅಹ್ಮದ್ ಖುರೇಶಿ, ಜಿ.ಪಂ ಮಾಜಿ ಅಧ್ಯಕ್ಷ ರಾಜಶೇಖರಗೌಡ ವಜ್ಜಲ್, ನಯೋಪ್ರಾ ಅಧ್ಯಕ್ಷ ಪ್ರಕಾಶ ಗುತ್ತೇದಾರ, ನಯೋಪ್ರಾ ಮಾಜಿ ಅಧ್ಯಕ್ಷ ರಾಜಾ ವಾಸುದೇವ ನಾಯಕ, ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜಾ ಕುಮಾರ ನಾಯಕ, ಅರ್ಬನ್ ಕೋ ಆಪರೇಟಿವ್ ಸೊಸಾಯಿಟಿ ಅಧ್ಯಕ್ಷ ರಾಜಾ ವಿಜಯಕುಮಾರ ನಾಯಕ, ಮುಖಂಡರಾದ ಮಲ್ಲಣ್ಣ ಸಾಹುಕಾರ ನರಸಿಂಗಪೇಟ, ಗುಂಡಪ್ಪ ಸೋಲಾಪುರ, ದೊಡ್ಡದೇಸಾಯಿ ದೇವರಗೋನಾಲ, ಭೀಮರಾಯ ಮೂಲಿಮನಿ, ವೆಂಕಟೇಶ ಹೊಸ್ಮನಿ,ಅಬ್ದುಲ ಗಫೂರ್ ನಗನೂರಿ, ನಾಸಿರ್ ಕುಂಡಾಲೆ, ಮಹಿಬೂಬ ಒಂಟಿ, ಮಲ್ಲಿಕಾರ್ಜುನ ಪೂಜಾರಿ, ಭೀರಲಿಂಗ ಬಾದ್ಯಾಪುರ, ಜುಮ್ಮಣ್ಣ ಕೆಂಗುರಿ, ಖಾಲಿದ್ ಅಹ್ಮದ್ ತಾಳಿಕೋಟಿ ಸೇರಿದಂತೆ ವಿಕಲಚೇತನರ ಕಲ್ಯಾಣಾಧಿಕಾರಿಗಳು ಸೇರಿದಂತೆ ಅನೇಕರು ಭಾಗವಹಿಸಿದ್ದರು.







