ಯಾದಗಿರಿ | ಸಾಲಕ್ಕಂಜಿ ಸರಕಾರಿ ಆಸ್ಪತ್ರೆ ಬಿಲ್ಡಿಂಗ್ ನಿಂದ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ

ಯಾದಗಿರಿ : ಶಹಾಪುರವಾಣಿ ಸಾಲಕ್ಕಂಜಿ ಸಾಲಗಾರರ ಉಪ್ಪಟಳ ತಾಳದೆ ಮನನೊಂದ ಮಾತ್ರಗಳನ್ನು ಸೇವಿಸಿ ಶಹಾಪುರ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದ ಹೊರ ರೋಗಿ ಓರ್ವ ಸರ್ಕಾರಿ ಆಸ್ಪತ್ರೆ ಬಿಲ್ಡಿಂಗ್ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಘಟನೆ ನಡೆದಿದೆ.
ಮೂಲತಃ ಶಹಾಪುರ ತಾಲೂಕಿನ ಸಾಧ್ಯಾಪುರ ಗ್ರಾಮದ ನಿವಾಸಿ ಮಲ್ಲನಗೌಡ (47) ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಎಂದು ತಿಳಿದು ಬಂದಿದೆ.
80 ಲಕ್ಷಕ್ಕೂ ಅಧಿಕ ಸಾಲ ಮಾಡಿದ್ದ ಮಲ್ಲನಗೌಡ ಸಾಲ ಪಡೆದವರು ಮನೆಗೆ ಬಂದು ಕೇಳಿದಾಗ ಮಾನಸಿಕವಾಗಿ ನೊಂದು ಮನೆಯಲ್ಲಿನ ಕೆಲವು ಮಾತ್ರೆಗಳನ್ನು ನುಂಗಿದ್ದ ಎನ್ನಲಾಗಿದೆ.
ವಿಷಯ ತಿಳಿಯುತ್ತಿದಂತೆ ಮನೆಯವರು ಶಹಾಪುರ ಸಾರ್ವಜನಿಕ ಆಸ್ಪತ್ರೆಗೆ ಕರೆ ತಂದಿದ್ದಾರೆ. ಇಲ್ಲಿನ ಶೂಶ್ರೂಕರು ತಪಾಷಣೆ ಚಿಕಿತ್ಸೆ ನೀಡುತ್ತಿದ್ದ ವೇಳೆ ಆಸ್ಪತ್ರೆ ಬಿಲ್ಡಿಂಗ್ ಮೇಲೆ ಹೋಗಿ ಬಿಳಲು ಯತ್ನ ಮಾಡುತ್ತಿದ್ದಾಗ ಆಸ್ಪತ್ರೆಯ ಕಾವಲುಗಾರರಾದ ರಾಚಯ್ಯಸ್ವಾಮೀ ಹೀರೆಮಠರವರು ಆತನ ಮನ ಒಲಿಸಿ ಕೆಳಗೆ ಇಳಿಸಿದ್ದಾರೆ ಎನ್ನಲಾಗಿದೆ.
ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.







