ಯಾದಗಿರಿ | 17 ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್ ಟಾಪ್ ವಿತರಿಸಿದ ಶಾಸಕ ಚೆನ್ನಾರೆಡ್ಡಿ ಪಾಟೀಲ್

ಯಾದಗಿರಿ: ಲ್ಯಾಪ್ ಟಾಪ್ ಮೂಲಕ ಆನ್ ಲೈನ್ ಕಡತಗಳನ್ನು ಬೇಗನೇ ಮುಗಿಸಿಕೊಡುವ ನಿಟ್ಟಿನಲ್ಲಿ ಗ್ರಾಮ ಆಡಳಿತಾಧಿಕಾರಿಗಳು ಜನರ ಕೆಲಸ ತ್ವರಿತ ಗತಿಯಲ್ಲಿ ಮಾಡಬೇಕೆಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಹೇಳಿದರು.
ನಗರದ ಶಾಸಕ ಕಭೇರಿಯಲ್ಲಿ ಶುಕ್ರವಾರ ತಾಲೂಕಿನ 17 ಗ್ರಾಮ ಆಡಳಿತ ಅಧಿಕಾರಿಗಳಿಗೆ ಲ್ಯಾಪ ಟಾಪ್ ವಿತರಣೆ ಮಾಡಿ ಮಾತನಾಡಿದರು.
ಸಾರ್ವಜನಿಕರು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಸರ್ಕಾರವೇ ಈ ತಂತ್ರಜ್ಞಾನ ವಸ್ತು ನಿಮಗೆ ನೀಡಿದ್ದು, ಇದರಿಂದ ಬೇಗನೆ ಕೆಲಸವಾಗಬೇ ವಿನಾಃ ನಿರ್ಲಕ್ಷ್ಯ ಸಲ್ಲ ಎಂದು ಶಾಸಕರು ತಾಕಿತು ಮಾಡಿದರು.
ತಹಶೀಲ್ದಾರ್ ಸುರೇಶ ಅಂಕಲಗಿ, ಕಂದಾಯ ನಿರಿಕ್ಣಕರು, ಎಲ್ಲಾ ಗ್ರಾಮ ಆಡಳಿತ ಅಧಿಕಾರಿಗಳು ಇದ್ದರು.
Next Story