Yadgiri | ನೂತನ ಜಿಲ್ಲಾಧಿಕಾರಿಗೆ ದಲಿತ ಸಂಘರ್ಷ ಸಮಿತಿಯಿಂದ ಸನ್ಮಾನ

ಯಾದಗಿರಿ: ಜಿಲ್ಲೆಗೆ ನೂತನ ಜಿಲ್ಲಾಧಿಕಾರಿಯಾಗಿ ಆಗಮಿಸಿರುವ ರಾಹುಲ್ ಪಾಂಡ್ವೆ ಠಾಕೂರ್ ಅವರನ್ನು ಯಾದಗಿರಿ ಜಿಲ್ಲಾ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಮಿತಿಯ ಜಿಲ್ಲಾ ಸಂಚಾಲಕರಾದ ಮರೆಪ್ಪ ಚಟ್ಟೇರಕರ್, ಅವರು ಜಿಲ್ಲೆಯ ವಿವಿಧ ಸಮಸ್ಯೆಗಳು, ಜನಸಾಮಾನ್ಯರು ಎದುರಿಸುತ್ತಿರುವ ತೊಂದರೆಗಳು ಹಾಗೂ ಅಭಿವೃದ್ಧಿಗೆ ಸಂಬಂಧಿಸಿದ ಕೆಲ ಪ್ರಮುಖ ವಿಷಯಗಳ ಕುರಿತು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.
ಇದರ ಜೊತೆಗೆ ಜಿಲ್ಲೆಯ ಸಾಮಾಜಿಕ ಮತ್ತು ಆಡಳಿತಾತ್ಮಕ ಹಿನ್ನೆಲೆಯ ಕುರಿತು ಪರಿಚಯ ಮಾಡಿಕೊಟ್ಟು, ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸುವಂತೆ ಅವರು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಹಿರಿಯ ಮುಖಂಡ ಗೋಪಾಲ ತೆಳಿಗೇರಿ, ಹೊನ್ನಪ್ಪ ಯಡ್ಡಳ್ಳಿ, ಭೀಮರಾಯ ಹೊಸಮನಿ, ಸೈದಪ್ಪ ಕೂಲೂರ, ಪರುಶರಾಮ್ ಒಡೆಯರ್, ಹಣಮಂತ ಮಿಲ್ಟ್ರೀ, ಮಲ್ಲೇಶೀ ಅನಸೂಗರ್, ಬಸ್ಸು ಬೋಳಾರಿ, ಹಣಮಂತ ಗುರುಸುಣಿಗಿ, ಮಾಳಿಂಗರಾಯ ಅನಸೂಗರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
Next Story




