ಯಾದಗಿರಿ | ಛಲವಾದಿ ನಾರಾಯಣಸ್ವಾಮಿ, ರವಿಕುಮಾರ್ ಹೇಳಿಕೆ ಖಂಡಿಸಿ ದಸಂಸದಿಂದ ಪ್ರತಿಭಟನೆ

ಯಾದಗಿರಿ : ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಕಲಬುರಗಿ ಜಿಲ್ಲಾಧಿಕಾರಿಗಳ ವಿರುದ್ಧ ಬಿಜೆಪಿ ಎಂಎಲ್‌ಸಿ ಎನ್.ರವಿಕುಮಾರ್ ಅವರು ಕೀಳುಮಟ್ಟದ ಭಾಷೆ ಬಳಸಿರುವುದನ್ನು ಖಂಡಿಸಿ, ಇವರಿಬ್ಬರ ವಿಧಾನ ಪರಿಷತ್ ಸದಸ್ಯತ್ವವನ್ನು ರದ್ದುಪಡಿಸಬೇಕೆಂದು ಒತ್ತಾಯಿಸಿ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ನೇತೃತ್ವದಲ್ಲಿ ವಿವಿಧ ತಾಲೂಕುಗಳ ಪದಾಧಿಕಾರಿಗಳು, ಕಾರ್ಯಕರ್ತರು ಮಂಗಳವಾರ ಜಿಲ್ಲಾ ಕ್ರೀಡಾಂಗಣದಿಂದ ಮೆರವಣಿಗೆ ನಡೆಸಿ ಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ನಂತರ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಸಮಿತಿ ಜಿಲ್ಲಾ ಸಂಚಾಲಕ ಶಿವಪುತ್ರ ಜವಳಿ, ಜಿಲ್ಲಾ ಸಂ. ಸಂಚಾಲಕರಾದ ಚಂದಪ್ಪ ಮುನಿಯೋಪ್ಪನವರ್, ಶಿವಲಿಂಗ ಹಸನಾಪೂರ, ಜಿಲ್ಲಾ ಖಜಾಂಚಿ ಭೀಮಣ್ಣ ಹುಣಸಗಿ ಅವರು ಮಾತನಾಡಿದದರು.
ಪ್ರತಿಭಟನೆಯಲ್ಲಿ ಜಿಲ್ಲಾ ವಿದ್ಯಾರ್ಥಿ ಒಕ್ಕೂಟದ ಮಲ್ಲಿಕಾರ್ಜುನ ಹುರಸಗುಂಡಗಿ, ಮಲ್ಲು ಬೇವಿನಹಳ್ಳಿ, ವಾಸು ಕೋಗಿಲಕರ್, ರಮೇಶ ಬಾಚಿಮಟ್ಟಿ, ಪುರಷೋತ್ತಮ ಬಬಲಾದ ಮರೆಪ್ಪ ಕ್ರಾಂತಿ, ಸಂತೋಷ ಗುಂಡಳ್ಳಿ, ಶರಬಣ್ಣ ದೋರನಹಳ್ಳಿ, ನಾಗರಾಜ ಕೊಡಮನಳ್ಳಿ, ಶ್ರೀಮಂತ ಸಿಂಗನಳ್ಳಿ, ಸುಭಾಷ ಹುರಸಗುಂಡಗಿ, ಸಿದ್ದಪ್ಪ ಕೊಡಮನಳ್ಳಿ, ತಾಯಪ್ಪ ಬಂಡಾರಿ, ರಂಗಸ್ವಾಮಿ ದಾಸಿ ಕೊಂಕಲ್, ತಿಪ್ಪಣ್ಣ ಶೆಳ್ಳಗಿ, ಶೇಖರ ಮಂಗಳೂರು, ರಾಜು ಬಡಿಗೇರ, ವೆಂಕಟೇಶ ದೇವಾಪೂರ, ಚನ್ನಪ್ಪ ದೇವಾಪೂರ, ಭೀಮರಾಯ ಮಂಗಳೂರು, ಖಾಜಾ ಅಜಮೀರ, ಎಂ.ಪಟೇಲ್, ಚಂದ್ರ ಬಲಶೆಟ್ಟಿಹಾಳ, ಪರಮಣ್ಣ ಚಲವಾದಿ, ಚೌಡಪ್ಪ ಯಡಹಳ್ಳಿ, ಸಾಯಬಣ್ಣ, ಯಲ್ಲಪ್ಪ ಗುಂಡ್ಲಗೇರಾ,ದೊಡ್ಡಪ್ಪ ಕಾಡಂಗೇರಾ, ಮಲ್ಲಪ್ಪ ಕೋಳಿ ಖಾನಾಪೂರ, ಚನ್ನಬಸ್ಸು ಗುರಸಣಗಿ, ಬನ್ನಪ್ಪ ಕುರಕುಂದಿ, ಹೊನ್ನಯ್ಯ ಪೂಜಾರಿ, ಶರಣಪ್ಪ ಮಳಳ್ಳಿ, ಮಲ್ಲಪ್ಪ ಅನವಾರ, ಪರಶುರಾಮ ಅಳಿಗೇರಿ, ಸಾಯಬಣ್ಣ ಬಳ್ಳಕ್ಕಿ, ಸಂದೀಪ ಹುರಸಗುಂಡಗಿ, ಬಸಲಿಂಗಪ್ಪ ಹಾಲಭಾವಿ, ನಾಗಪ್ಪ ರಸ್ತಾಪೂರ, ದೇವಪ್ಪ ಕೊಂಬಿನ್, ರವಿ ಹಳಿಸಗರ, ಭೀಮಾಶಂಕರ ಗುಂಡಳ್ಳಿ, ಜೈಭೀಮ ಸಿಂಗನಹಳ್ಳಿ, ನಾಗರಾಜ ಹುರಸಗುಂಡಗಿ, ಶರಣಪ್ಪ ಕೊಂಬಿನ್ ಕುರಕುಂದಾ, ದೇವ ಕುರಕುಂದಾ, ದೇವ ಅಜ್ಜನೂರ, ಸಾಬಣ್ಣ ವಗ್ಗಾ, ಚಂದ್ರ ಬುಧನಗರ, ಗೌತಮ, ಚಂದ್ರಶೇಖರ, ಮಲ್ಲಿಕಾರ್ಜುನ (ಮನಗನಾಳ), ಸಿದ್ದಪ್ಪ ಸೇರಿದಂತೆ ಇತರರಿದ್ದರು.