ಯಾದಗಿರಿ: ಫೆ. 8, 9 ರಂದು ಸಾರ್ವಜನಿಕ ಕುರ್‌ಆನ್ ಸಂದೇಶ ಪ್ರವಚನ ಕಾರ್ಯಕ್ರಮ

ಯಾದಗಿರಿ: ಜಮಾಅತೆ ಇಸ್ಲಾಮಿ ಹಿಂದ್ ಯಾದಗಿರಿ ಇದರ ಆಶ್ರಯದಲ್ಲಿ ಕನ್ನಡದಲ್ಲಿ ಕುರ್ ಆನ್ ಸಂದೇಶ ಎಂಬ ಶೀರ್ಷಿಕೆ ಯಡಿಯಲ್ಲಿ ಸಾರ್ವಜನಿಕ ಕುರ್ ಆನ್ ಪ್ರವಚನ ಕಾರ್ಯಕ್ರಮವು ಫೆ. 8 ಮತ್ತು 9 ಎರಡು ದಿವಸ ಸಂಜೆ 7 ಗಂಟೆಗೆ ನಗರದ ಈಡನ್ ಗಾರ್ಡನ್ ಫಂಕ್ಷನ್ ಹಾಲ್ ಮೈದಾನದಲ್ಲಿ ನಡೆಯಲಿದೆ ಈ ಕಾರ್ಯಕ್ರಮದಲ್ಲಿ ಪ್ರಮುಖ ಪ್ರವಚನಕಾರರಾದ ಜನಾಬ್ ಮಹಮ್ಮದ್ ಕುಂಇ್ ಮಾನವ ಘನತೆ ಹಾಗೂ ಜೀವನದ ಉದ್ದೇಶ ವಿಷಯದಲ್ಲಿ ಪ್ರವಚನ ನೀಡಲಿದ್ದಾರೆ ಎಂದು ಜಮಾತೇ ಇಸ್ಲಾಮಿಕ್ ಹಿಂದ್ ಕರ್ನಾಟಕ ರಾಜ್ಯ ಸಲಹಾ ಸಮಿತಿ ಸದಸ್ಯ ಲಬೀದ್ ಶಾಫಿ ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಸುದ್ದಿ ಗೋಷ್ಠಿ ಉದ್ದೇಶಿಸಿ ಮಾತನಾಡಿದ ಜಮಾತೇ ಇಸ್ಲಾಮ್ ಹಿಂದ್ ಯಾದಗಿರಿ ಜಿಲ್ಲಾ ಸಂಚಾಲಕ ಮಿನ್ಹಾಜುದ್ದೀನ್ ಅವರು ನಾಡಿನ ಸೌಹಾರ್ದ ಪರಂಪರೆಯನ್ನು ಬಲಪಡಿಸುವ ಸಲುವಾಗಿ ಹಾಗೂ ಸಮಾಜದಲ್ಲಿ ಬೆಳೆಯುತ್ತಿರುವ ಅಪನಂಬಿಕೆ ಹಾಗೂ ತಪ್ಪುಕಲ್ಪನೆಗಳನ್ನು ಹೋಗಲಾಡಿಸುವ ಸಲುವಾಗಿ ಈ ಪ್ರವಚನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಈ ಪ್ರವಚನದಲ್ಲಿ ಮುಖ್ಯ ಅತಿಥಿಗಳಾಗಿ ರಾಜ್ಯದ ಖ್ಯಾತ ಧರ್ಮ ಗುರುಗಳಾದ ಶ್ರೀ ಹವಾ ಮಲ್ಲಿನಾಥ ಮಹಾರಾಜ ಮಹಾಸ್ವಾಮಿಗಳು, ಶ್ರೀ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀ ಶಾಂತವೀರ ಗುರು ಮುರುಗರಾಜೇಂದ್ರ ಮಹಾಸ್ವಾಮಿಗಳು, ಶ್ರೀ ಗುರುಲಿಂಗ ಮಹಾಸ್ವಾಮಿಗಳು, ಹಜ್ರತ್ ಅಲ್ಹಾಜ್ ಶಾಹ್ ಖ್ವಾಜಾ ಬಹಾವುದ್ದೀನ್ ಸಾಹೇಬ್, ಹಜರತ್ ಖ್ವಾಜಾ ಸೆಯ್ಯದ್ ಅಬು ತುರಾಬ್, ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ಗೌಡ ದರ್ಶನಾಪೂರ ಯಾದಗಿರಿ ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರು, ಸುರಪುರ ಶಾಸಕ ರಾಜ ವೇಣುಗೋಪಾಲ ನಾಯಕ, ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಜಮಾತ್ ಇಸ್ಲಾಮಿ ರಾಜ್ಯಾಧ್ಯಕ್ಷರಾದ ಮಹಮ್ಮದ್ ಸಾದ್ ಭಾಗವಹಿಸಲ್ಲಿದ್ದಾರೆ ಎಂದು ತಿಳಿಸಿದರು.
ಸುದ್ದಿ ಗೋಷ್ಠಿಯಲ್ಲಿ ಗುಲಾಂ ಮೆಹಬೂಬ್ ಖಯ್ಯತ್, ಮುಹಮ್ಮದ್ ಮಿನ್ಹಾಜುದ್ದೀನ್, ಅಬ್ದುಲ್ ಮಜೀದ್ ಸಗರಿ, ಜ್ಯಾನೇಶ್ವರ ಸೇರಿದಂತೆ ಅನೇಕರು ಇದ್ದರು.