ಯಾದಗಿರಿ | ಕಣ್ವ ಮಠದ ಮಠಾಧಿಕಾರಿಯಾಗಿ ರಾಘವೇಂದ್ರಾಚಾರ್ಯ ನೇಮಕ

ಸುರಪುರ: ತಾಲ್ಲೂಕಿನ ಹುಣಸಿಹೊಳೆ ಕಣ್ವಮಠದ ಮಠಾಧಿಕಾರಿಯನ್ನಾಗಿ ಕಣ್ವಮಠಾಧೀಶ ವಿದ್ಯಾಕಣ್ವ ವಿರಾಜ ತೀರ್ಥರು ನಗರದ ರಾಘವೇಂದ್ರಾಚಾರ್ಯ ಜಹಗೀರದಾರ್ ಶಾಂತಪುರ ಅವರನ್ನು ನೇಮಕ ಮಾಡಿದ್ದಾರೆ.
ತಾಲ್ಲೂಕಿನ ಹುಣಸಿಹೊಳೆ ಕಣ್ವಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆದೇಶ ಪತ್ರ ನೀಡಿ ಮಾತನಾಡಿದ ಮಠಾಧೀಶರು, ಕಣ್ವಮಠದ ಎಲ್ಲ ಕಾರ್ಯಕ್ರಮಗಳನ್ನು ತಾಲ್ಲೂಕಿನ ಅನುಯಾಯಿಗಳಿಗೆ ತಿಳಿಸುವ ಮತ್ತು ಭಾಗವಹಿಸುವಂತೆ ಮಾಡುವ ಜವಾಬ್ದಾರಿ ಮಠಾಧಿಕಾರಿಗೆ ಇದೆ ಎಂದರು.
ಸುರಪುರ ಸಂಸ್ಥಾನಿಕ ರಾಜಾ ಲಕ್ಷ್ಮಿನಾರಾಯಣ ನಾಯಕ, ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷ ರಾಜಾ ಕುಮಾರ ನಾಯಕ, ರಾಘವೇಂದ್ರರಾವ ಆಲಗೂರ, ಪ್ರಕಾಶ ಕುಲಕರ್ಣಿ ಬಳ್ಳಾರಿ, ರಾಘವೇಂದ್ರ ಕುಲಕರ್ಣಿ ಗೆದ್ದಲಮರಿ, ಗಂಗಾಧರ ಜೋಷಿ ಕೊಡೇಕಲ್, ರಂಗನಾಥಾಚಾರ್ಯ ಸಾಲಗುಂದಿ, ಚಂದ್ರಕಾಂತ ನಾಡಗೌಡ, ಗಣೇಶ ಜಹಗೀರದಾರ, ಪ್ರಸನ್ನ ಆಲಂಪಲ್ಲಿ, ರಾಜೇಂದ್ರಾಚಾರ್ಯ ಬುದ್ದಿನ್ನಿ ಇತರರು ಭಾಗವಹಿಸಿದ್ದರು.
Next Story