ಯಾದಗಿರಿ | ರಾಜಾ ವಾಸುದೇವ ನಾಯಕರ ಮೃತ ದೇಹ ವೈದ್ಯಕೀಯ ಕಾಲೇಜಿಗೆ ದಾನ

ಸುರಪುರ: ನಗರದ ಹಿರಿಯ ಮುಖಂಡರು ಹಾಗೂ ಎಪಿಎಮ್‌ಸಿ ಮಾಜಿ ಅಧ್ಯಕ್ಷ ಹಾಗೂ ಸುರಪುರ ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷ ರಾಜಾ ಮುಕುಂದ ನಾಯಕ ಹಾಗೂ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ (ತಾತಾ) ಅವರ ತಂದೆ ರಾಜಾ ವಾಸುದೇವ ನಾಯಕ ಅವರ ಇಚ್ಚೆಯಂತೆ ಮೃತದೇಹವನ್ನು ಯಾದಗಿರಿಯ ವೈದ್ಯಕೀಯ ಮಹಾವಿದ್ಯಾಲಯಕ್ಕೆ ಹಸ್ತಾಂತರಿಸಿದರು. 93 ವರ್ಷ ವಯಸ್ಸಾಗಿದ್ದ ಅವರು ಬುಧವಾರ ಮಧ್ಯಾನ್ಹ ನಿಧನರಾಗಿದ್ದರು.
ಅವರು ಜೀವಿತದ ಸಮಯದಲ್ಲಿ ತಮ್ಮ ಇಬ್ಬರು ಮಕ್ಕಳಿಗೆ ತಾವು ನಿಧನರಾದ ನಂತರ ತಮ್ಮ ಮೃತದೇಹವನ್ನು ವೈದ್ಯಕೀಯ ಕಾಲೆಜಿಗೆ ನೀಡುವಂತೆ ತಿಳಿಸಿದ್ದರು, ಅವರ ಇಚ್ಚೆಯಂತೆ ಗುರುವಾರ ಮಧ್ಯಾಹ್ನ ಸ್ವಗೃಹದಲ್ಲಿ ಅಂತಿಮ ಯಾತ್ರೆಯ ಎಲ್ಲಾ ವಿಧಿ ವಿಧಾನಗಳನ್ನು ಪೂರೈಸಿದ ನಂತರ ಯಾದಗಿರಿ ಮೆಡಿಕಲ್ ಕಾಲೇಜಿಗೆ ನೀಡಿದರು.
ಈ ಸಂದರ್ಭದಲ್ಲಿ ಸುರಪುರ ಅರಸು ಮನೆತನದ ರಾಜಾ ಕೃಷ್ಣಪ್ಪ ನಾಯಕ,ಮಾಜಿ ಸಚಿವ ನರಸಿಂಹ ನಾಯಕ (ರಾಜುಗೌಡ), ಕಾಂಗ್ರೆಸ್ ಮುಖಂಡರಾದ ರಾಜಾ ಸಂತೋಷ ನಾಯಕ, ರಾಜಾ ಕುಮಾರ ನಾಯಕ, ರಾಜಾ ಹರ್ಷವರ್ಧನ ನಾಯಕ,ತಾಲ್ಲೂಕ ಆರೋಗ್ಯಾಧಿಕಾರಿ ಡಾ.ಆರ್.ವಿ.ನಾಯಕ ಹಾಗೂ ಮುಖಂಡರಾದ ಬಸವರಾಜ ಜಮದ್ರಖಾನಿ, ಸುರೇಶ ಸಜ್ಜನ್, ಕಿಶೋರಚಂದ್ ಜೈನ್,ಹನುಮಂತ ನಾಯಕ (ಬಬ್ಲುಗೌಡ),ಯಲ್ಲಪ್ಪ ಕುರಕುಂದಿ, ಬಲಭೀಮ ನಾಯಕ ಬೈರಿಮಡ್ಡಿ, ದೊಡ್ಡ ದೇಸಾಯಿ ದೇವರಗೋನಾಲ ಸೇರಿದಂತೆ ನೂರಾರು ಜನ ಮುಖಂಡರು ಹಾಗೂ ಸಾವಿರಾರು ಜನರು ಭಾಗವಹಿಸಿದ್ದರು.







