ಯಾದಗಿರಿ | ಆ.6 ರಂದು ಒತ್ತಡ ರಹಿತ ಜೀವನಕ್ಕಾಗಿ ವಿಚಾರ ಸಂಕಿರಣ: ರಾಜಯೋಗಿನಿ ಬಿ.ಕೆ.ನಿರಾ ಅಕ್ಕ

ಯಾದಗಿರಿ: ಇಲ್ಲಿನ ಪ್ರಜಾಪತಿ ಬ್ರಹ್ಮಕುಮಾರಿಸ್ ಈಶ್ವರಿಯ ವಿಶ್ವವಿದ್ಯಾಲಯವು ಆ.6 ರಂದು ಮಧ್ಯಾಹ್ನ 2ಕ್ಕೆ ಡಿಸಿ ಕಚೇರಿ ಸಭಾಂಗಣದಲ್ಲಿ ಒತ್ತಡ ಮುಕ್ತ , ಮೌಲ್ಯಯುತ ಜೀವನ ನಡೆಸಲು ( ಮೈಡ್, ಬ್ವಾಡಿ ಮತ್ತು ಮೆಡಿಸನ್) ವಿಚಾರ ಸಂಕಿರಣ ಹಮ್ಮಿಕೊಂಡಿದೆ ಎಂದು ರಾಜಯೋಗಿನಿ ಬಿ.ಕೆ.ನಿರಾ ಹೇಳಿದರು.
ಕಲಬುರಗಿ ಪ್ರಜಾಪತಿ ಬ್ರಹ್ಮಕುಮಾರಿಸ್ ಈಶ್ವರಿಯ ವಿಶ್ವ ವಿದ್ಯಾಲಯದ ಉಪ ವಲಯದ ಮುಖ್ಯಸ್ಥರಾದ ರಾಜಯೋಗಿನಿ ಬಿ.ಕೆ.ವಿಜಯಾ ದಿದಿ ಅವರು ಕಾರ್ಯಕ್ರಮ ಉದ್ಘಾಟಿಸಿ ಮುಖ್ಯ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಿಸಿ ಹರ್ಷಲ್ ಭೋಯರ್, ಜಿಪಂ ಸಿಇಓ ಲವೀಶ್ ಓರಡಿಯಾ, ಎಸ್ ಪಿ ಪ್ರಥ್ವಿಕ್ ಶಂಕರ್, ಹೆಚ್ಚುವರಿ ಡಿಸಿ ರಮೇಶ ಕೋಲಾರ, ಮೆಡಿಕಲ್ ಕಾಲೇಜಿನ ಡಿನ್ ಡಾ.ಸಂದೀಪ್, ವೈದ್ಯರಾದ ಬಿ.ಕೆ.ಡಾ.ಕಿಶೋರಿ, ಡಾ.ಮಂಜುನಾಥ ದೊಶೆಟ್ಟಿ, ರಾಷ್ಟ್ರಿಯ ಉಪಾಧ್ಯಕ್ಷ ಬಿ.ಕೆ.ಪ್ರೇಮ್ ಅಣ್ಣಾ, ಡಿಎಚ್ ಒ ಡಾ.ಮಹೇಶ ಬಿರಾದಾರ ಅವರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಮುಖ್ಯವಾಗಿ ವೈದ್ಯರು, ಸರ್ಕಾರಿ ನೌಕರರು ಮತ್ತು ಸಾರ್ವಜನಿಕರು ಇದರ ಲಾಭ ಪಡೆಯುವಂತೆಯೇ ಅವರು ಮನವಿ ಮಾಡಿದ್ದಾರೆ. ಕಾರ್ಯಕ್ರಮದ ನಂತರ ರಕ್ಷ ಬಂಧನದ ಅಂಗವಾಗಿ ಎಲ್ಲರಿಗೂ ರಾಖಿ ಕಟ್ಟಲಾಗುವುದು ಮತ್ತು ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
ರಕ್ಷಾ ಬಂಧನ ಮಹೋತ್ಸವ
ಪ್ರಜಾಪತಿ ಬ್ರಹ್ಮಕುಮಾರಿಸ್ ಈಶ್ವರಿಯ ವಿಶ್ವ ವಿದ್ಯಾಲಯವು ಆ.6 ರಂದು ಸಂಜೆ 6ಕ್ಕೆ ಬಾಲಾಜಿ ನಗರದ ಅಮೃತ ಕುಂಜ ಭವನ ದಲ್ಲಿ ರಕ್ಷಾ ಬಂಧನ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ರಾಜಯೋಗಿನಿ ಬಿ.ಕೆ.ನಿರಾ ಹೇಳಿದ್ದಾರೆ. ಕಾರ್ಯಕ್ರಮವನ್ನು ಶಾಸಕ ಶರಣಗೌಡ ಕಂದಕೂರ ಉದ್ಘಾಟಿಸಲಿದ್ದಾರೆ. ಮುಖ್ಯ ಭಾಷಣಕಾರರಾಗಿ ಕಲಬುರಗಿ ಪ್ರಜಾಪತಿ ಬ್ರಹ್ಮಕುಮಾರಿಸ್ ಈಶ್ವರಿಯ ವಿಶ್ವ ವಿದ್ಯಾಲಯದ ಉಪ ವಲಯದ ಮುಖ್ಯಸ್ಥರಾದ ರಾಜಯೋಗಿನಿ ಬಿ.ಕೆ.ವಿಜಯಾ ದಿದಿ ಅವರು ಭಾಗವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೊದ್ಯಮಿಗಳ ಸಂಘದ ಅಧ್ಯಕ್ಷ ದಿನೇಶಕುಮಾರ ಜೈನ್, ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ಸುಭಾಷಚಂದ್ರ ಕೌಲಗಿ ಅವರು ಭಾಗವಹಿಸಲಿದ್ದಾರೆ. ರಾಷ್ಟ್ರಿಯ ಉಪಾಧ್ಯಕ್ಷ ರಾಜಯೋಗಿ ಬಿ.ಕೆ. ಡಾ.ಪ್ರೇಮ ಅಣ್ಣಾ ಅವರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಅವರು ಹೇಳಿದರು.







