ಯಾದಗಿರಿ | ಭಾರತದ ಸಂಸ್ಕೃತಿಯನ್ನು ಜಗತ್ತಿಗೆ ಸಾರಿದವರಲ್ಲಿ ಶಂಕರಾಚಾರ್ಯರು ಮೊದಲಿಗರು : ಹೆಚ್ಚುವರಿ ಡಿಸಿ ಕೊಟಪ್ಪಗೋಳ್

ಯಾದಗಿರಿ: ಭಾರತದ ಸಂಸ್ಕೃತಿಯನ್ನು ಜಗತ್ತಿಗೆ ಸಾರಿ ಹೇಳಿದ ಆಚಾರ್ಯರಲ್ಲಿ ಶಂಕರಾಚಾರ್ಯರು ಮೊದಲಿಗರು ಎಂದು ಹೆಚ್ಚುವರಿ ಡಿಸಿ ಶರಣಬಸಪ್ಪ ಕೋಟೆಪ್ಪಗೋಳ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ , ನಗರಸಭೆ ಇವರ ಸಹಯೋಗದಲ್ಲಿ ಶ್ರೀ ಶಂಕರಾಚಾರ್ಯರ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈ ವೇಳೆ ಗುರುಪ್ರಾಸದ ವೈದ್ಯ ಉಪನ್ಯಾಸ ನೀಡಿದರು. ಸಹಾಯಕ ನಿರ್ದೇಶಕಿ ಉತ್ತರಾದೇವಿ ಮಠಪತಿ, ಸಮಾಜದ ಮುಖಂಡರಾದ ಡಾ.ಪರಶುರಾಮ ಕೆಂಭಾವಿ, ಪ್ರವೀಣ್ ಕುಲಕರ್ಣಿ, ರವಿಂದ್ರ ಕುಲಕರ್ಣಿ, ಶಾರದಾ ಇದ್ದರು.
Next Story





